ದಿನದ ಸುದ್ದಿ

ಮೈಸೂರು ದಸರಾ : ಜನ ಮಾನಸದಲ್ಲಿ ಉಳಿದ ಆಯುಧ ಪೂಜೆ

Published

on

ಸುದ್ದಿದಿನ ಡೆಸ್ಕ್ : ವಿಶ್ವವಿಖ್ಯಾತ ದಸರಾ ಮಹೋತ್ಸವ 2018 ಅರಮನೆಯಲ್ಲಿ ಇಂದುಸಾಂಗೋಪಾಂಗೋವಾಗಿ ಸಾಂಪ್ರದಾಯಿಕ ಆಯುಧ ಪೂಜೆ ನಡೆಯಿತು.ಬೆ.5.30ಕ್ಕೆ ಚಂಡಿ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಯಿತು.ಬೆ.7ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸಿದವು. ಬೆ.7.45ಕ್ಕೆ ಖಾಸ್ ಆಯುಧಗಳು ಅರಮನೆಯಿಂದ ಜಯ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕಳುಹಿಸಿ ಪೂಜೆ ಮಾಡಲಾಯಿತು.

ಆಯುಧಗಳೊಂದಿಗೆ ಪಟ್ಟದ ಆನೆ, ಕುದುರೆ, ಹಸು ಹೆಜ್ಜೆ ಹಾಕಿದವು.‌ಬೆ.8.15ರಿಂದ 8.30ಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳನ್ನು ತರಲಾಯಿತು. ಅರಮನೆ ರಾಣಿ ಮನೆ ಮುಂಭಾಗದಲ್ಲಿ ಒಂದೇ ಸಂಖ್ಯೆಯ(1953) ಯ ಕಾರುಗಳ ಪ್ರದರ್ಶನ ಮಾಡಲಾಯಿತು.ಬೆ.9ಕ್ಕೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿ ಹೋಮ ಪೂರ್ಣಾಹುತಿ ಮಾಡಲಾಯಿತು. 9 ಗಂಟೆಗೆ ಸಂಸದೆ ಶೋಭಾಕರಂದ್ಲಾಜೆಯಿಂದ ಮಾವುತರ ಕುಟುಂಬಕ್ಕೆ ತಿಂಡಿ ಬಡಿಸುವ ಕಾರ್ಯ ನೆರವೇರಿತು.

9.30 ಕ್ಕೆ ಪಟ್ಟದ ಆನೆ, ಹಸು, ಕುದುರೆ, ಒಂಟೆ ಹಾಗೂ ರಾಜಮನೆತನದ ವಾಹನಗಳು ಸವಾರಿ ತೊಟ್ಟಿಗೆ ಆಗಮಿಸಿದವು. 9.30 ಕ್ಕೆ ಅರಮನೆ ಆವರಣದಲ್ಲಿ ಆಯುಧಪೂಜೆ ನಿಮಿತ್ತ ಜಂಬೂಸವಾರಿ ಆನೆಗಳಿಗೆ ಪೂಜೆ ಮಾಡಲಾಯಿತು. ಬೆ.10ರಿಂದ 10.25 ಕಲ್ಯಾಣ ಮಂಟಪದಲ್ಲಿ ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿದಂತೆ ಅರಮನೆಯ ಆಯುಧಗಳಿಗೆ ಪೂಜೆ ನಡೆಯಿತು.ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜೆ ಸಲ್ಲಿಸಿದರು.‌ಸಾಯಂಕಾರ ಅಂಬಾವಿಲಾಸ ದರ್ಬಾರ್ ಹಾಲ್‌ನಲ್ಲಿ ಖಾಸಗಿ ದರ್ಬಾರ್ ಜೊತೆಗೆ ಸಿಂಹಾಸನದ ಸಿಂಹ ವಿಸರ್ಜನೆ ಹಾಗೂ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆಯು ನಡೆಯುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version