ರಾಜಕೀಯ
ಮೈಸೂರು ಮಹಾನಗರಪಾಲಿಕೆ ಚುನಾವಣೆ : ಕಾಂಗ್ರೆಸ್ ಗೆ ಒಲಿದ ಮೇಯರ್ ಪಟ್ಟ : ಉಪಮೇಯರ್ ಆಗಿ ಜೆಡಿಎಸ್ ಅಭ್ಯರ್ಥಿ
ಸುದ್ದಿದಿನ ಡೆಸ್ಕ್ : ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮೇಯರ್ ಪಟ್ಟ ಒಲಿದ ಹಿನ್ನೆಲೆ ಶಾಂತಕುಮಾರಿ ಹಾಗೂ ಪುಷ್ಪಲತಾ ಜಗನ್ನಾಥ್ ನಡುವೆ ಮೇಯರ್ ಪಟ್ಟಕ್ಕೆ ಪೈಪೋಟಿ ನಡೆದಿದೆ.
ಜೆಡಿಎಸ್‌ನ ಶಫಿ ಅಹಮದ್ ಉಪಮೇಯರ್ ಆಗೋದು ಬಹುತೇಕ ಖಚಿತವಾಗಿದೆ.ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪುಷ್ಪಲತಾ ಜಗನ್ನಾಥ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಯಿತು.ಶಾಂತಕುಮಾರಿ, ಪುಷ್ಪಲತಾ ಜಗನ್ನಾಥ್ ನಡುವೆ ನಡೆದ ಭಾರಿ ಪೈಪೋಟಿಯಲ್ಲಿಅಂತಿಮವಾಗಿ ಪುಷ್ಪಲತಾ ಹೆಸರು ಅಂತಿಮಗೊಳಿಸಿದರು ಕೈ ನಾಯಕರು.