ದಿನದ ಸುದ್ದಿ
ಮೈಸೂರು ಸಂಸ್ಥಾನದ ‘ಕಟ್ಟಪ್ಪ’ ಇನ್ನಿಲ್ಲ
ಸುದ್ದಿದಿನ ಡೆಸ್ಕ್: ಮೈಸೂರು ಸಂಸ್ಥಾನದ ಹಿರಿಯ ಉಸ್ತಾದ್ ಕೃಷ್ಣಾಜೆಟ್ಟಪ್ಪ (94) ವಿಧಿವಶರಾದರು.
ಅರಮನೆಯ ಪ್ರಖ್ಯಾತ ದಸರಾ ವಜ್ರಮುಷ್ಠಿ ಕಾಳಗಕ್ಕೆ ಮಾರ್ಗದರ್ಶಕರಾಗಿದ್ದ ಕೃಷ್ಣಾಜೆಟ್ಟಪ್ಪ ಅವರು ಮೈಸೂರಿನ ರಾಘವೇಂದ್ರ ನಗರದ ನಿವಾಸದಲ್ಲಿ ಕೊನೆಯುಸಿರೆಳೆದರು.
ಮೈಸೂರಿನ ರಾಜ ವಂಶಸ್ಥರ ನಿಷ್ಠಾವಂತ ಪೈಲ್ವಾನ್ ಹಾಗೂ ಮೂಳೆ ತಜ್ಞರಾಗಿದ್ದ ಅವರು ಪತ್ನಿ ಹಾಗೂ 10 ಮಕ್ಕಳನ್ನು ಅಗಲಿದ್ದಾರೆ.
ಇವರ ಮಾರ್ಗದರ್ಶನದಲ್ಲಿ ನೂರಾರು ಜೆಟ್ಟಿಗಳು ವಜ್ರಮುಷ್ಠಿ ಕಾಳಗ ಮಾಡಿದ್ದರು.
ಭಾನುವಾರ ಬೆಳಗ್ಗೆ ಚಾಮುಂಡಿಬೆಟ್ಟ ತಪ್ಪಲಿನ ರುದ್ರಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿತು.