ದಿನದ ಸುದ್ದಿ
ಮೈಸೂರು ಸಿಲ್ಕ್ ಸೀರೆ ಪ್ರಿಯರಿಗೆ ಸಿಹಿಸುದ್ದಿ..!
ಸುದ್ದಿದಿನ ಡೆಸ್ಕ್ : ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವು ಸಿಲ್ಕ್ ಸೀರೆ ಪ್ರಿಯರಿಗೆ ಸಿಹಿಸುದ್ದಿ ನೀಡಿದ್ದು, ಅಗ್ಗದ ದರದಲ್ಲಿ ಮೈಸೂರು ರೇಷ್ಮೆ ಸೀರೆ ಕೊಡುವ ಚಿಂತನೆ ನಡೆಸಿದೆ. ನಿಗಮ ಅಂದುಕೊಂಡಂತೆ ಕಡಿಮೆ ಬೆಲೆಗೆ ಸೀರೆ ಮಾರಾಟ ಮಾಡಿದರೆ ಬಡವರೂ ಸಹ ಖರೀದಿಸಿ ಸಂತಸ ಪಡಬಹುದಾಗಿದೆ.
ನಿಗಮದಲ್ಲಿ ಸದ್ಯ 15,000ದಿಂದ 3 ಲಕ್ಷ ರೂ. ವರೆಗೂ ಬೆಲೆಯ ಮೈಸೂರು ಸಿಲ್ಕ್ ಸೀರೆಗಳು ಮಾರಾಟ ಮಾಡುತ್ತಿದೆ. ಆದರೆ, ಇವುಗಳು ಹಣವಿದ್ದವರು ಮಾತ್ರ ಖರೀದಿಸುವ ಪರಿಸ್ಥಿತಿ ಇತ್ತು. ಈಗ ನಿಗಮವು 4,500ರೂ. ಸಿಲ್ಕ್ ಸೀರೆ ಮಾರಾಟ ಮಾಡಲು ಮುಂದಾಗಿದ್ದು, ಎಲ್ಲರಿಗೂ ಕೈಗೆಟಕುವ ದರದಲ್ಲಿ ಸೀರೆ ಸಿಗುವಂತಾಗುತ್ತದೆ. ಬಜೆಟ್ ಸಿಲ್ಕ್ ಸೀರೆಗಳನ್ನು ವರ ಮಹಾಲಕ್ಷ್ಮೀ ಹಬ್ಬದ ವೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಸಿಲ್ಕ್ ಸೀರೆಗಳು ಉತ್ಪಾದನೆ ಕಾರ್ಯವನ್ನು ಮಾಡುತ್ತಿದೆ.
ಮೈಸೂರು ರೇಷ್ಮೆ ಸೀರೆ ಮಾರಾಟ ಮಳಿಗೆಗಳನ್ನು ಉತ್ತರ ಕರ್ನಾಟಕದ ಬದಾಮಿ, ಮಂಡ್ಯ ಜಿಲ್ಲೆಯ ಕೆ ಆರ್ ಸ್ ಅಣೆಕಟ್ಟು ಹಾಗೂ ಮೈಸೂರಿನ ಲಲಿತ್ ಮಹಲ್ ನಲ್ಲಿ ತೆರೆಯಲಾಗಿದೆ. ವಿದೇಶದಲ್ಲೂ ಮೈಸೂರು ರೇಷ್ಮೆ ಸೀರೆ ಮಾರಾಟ ಮಳಿಗೆ ಆರಂಭಿಸುವ ಉದ್ದೇಶವೂ ಇದೆ. ಖಾಸಗಿ ಮಳಿಗೆಗಳಲ್ಲಿ ನಕಲಿ ರೇಷ್ಮೆ ಸೀರೆಗಳ ಮಾರಾಟ ಮಾಡಿ ಪ್ರವಾಸಿಗರನ್ನು ವಂಚಿಸುತ್ತಿರುವ ಬಗ್ಗೆ ದೂರುಗಳಿವೆ. ಇಂತಹ ಮಳಿಗೆಗಳ ಮುಚ್ಚುವ ನಿರ್ಧರಿಸಲಾಗಿದೆ ಎಂದು ನಿಗಮದ ಮಹೇಶ್ ತಿಳಿಸಿದ್ದಾರೆ.