ದಿನದ ಸುದ್ದಿ
ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ
ಸುದ್ದಿದಿನ, ಮೈಸೂರು : ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಮಾರುತಿ ಶ್ರೀಧರ್ ಎಂಬುವರು 1 ಸಾವಿರ ರೂ. ಪಾವತಿಸಿ ಲವ್‍ಬರ್ಡ್, ವಿವಾನ್ ಆಕಾಶ್ ಶಿವಂ ಎಂಬುವವರು 2 ಸಾವಿರ ರೂ. ಪಾವತಿಸಿ ನಾಗರಹಾವು, ಅನಘ ಕೇಲ್ ಮತ್ತು ತೇಜಸ್ ಕೇಲ್, ಪುಣೆ ಇವರಿಂದ 10 ಸಾವಿರ ರೂ. ಪಾವತಿಸಿ ಹೊಲಾಕ್ ಗಿಬ್ಬನ್, ಮೈಸೂರಿನ ಜಿ.ಎಸ್.ಪ್ರಸನ್ನ ಕುಮಾರ್ ಎಂಬುವವರು 5 ಸಾವಿರ ರೂ. ಪಾವತಿಸಿ ಇಂಡಿಯನ್ ಮುಂಟ್ಜಾಕ್, ಎನ್.ಎಸ್ ಅನುಪ್ ಭಾರದ್ವಾಜ್ ಎಂಬುವವರು 2 ಸಾವಿರ ರೂ. ಪಾವತಿಸಿ ಎಕ್ಲೆಕ್ಟಸ್ ಗಿಳಿ ಮತ್ತು ಚಿದಂಬರಂ ಬಿ ಎಂಬುವವರು 1 ಸಾವಿರ ರೂ. ಪಾವತಿಸಿ ಕೆರೆ ಹಾವನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243