ದಿನದ ಸುದ್ದಿ

ಆಂಧ್ರಪದೇಶದ ಸಿಎಂ ಆಗಿ ಎನ್.ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ

Published

on

ಸುದ್ದಿದಿನಡೆಸ್ಕ್: ಆಂಧ್ರಪದೇಶದ ಮುಖ್ಯಮಂತ್ರಿಯಾಗಿದ ಎನ್.ಚಂದ್ರಬಾಬು ನಾಯ್ಡು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ವಿಜಯವಾಡದಲ್ಲಿ ನಡೆದ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಶಾಸಕರಿದ್ದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು, ಆಂಧ್ರಪ್ರದೇಶ ವಿಧಾನಸಭೆಗೆ ಎನ್‌ಡಿಎ ನಾಯಕರಾಗಿ ಚಂದ್ರಬಾಬು ಅವರ ಹೆಸರನ್ನು ಸೂಚಿಸಿದರು. ಇದಕ್ಕೆ ಎಲ್ಲ ಎನ್‌ಡಿಎ ಶಾಸಕರು ಬೆಂಬಲ ಸೂಚಿಸಿದರು.

175 ಸದಸ್ಯಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು 164 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ವಿಜಯ ದಾಖಲಿಸಿತು. ಈ ಪೈಕಿ ಟಿಡಿಪಿ 135, ಜನಸೇನಾ 21 ಮತ್ತು ಬಿಜೆಪಿ 8 ಸ್ಥಾನಗಳಲ್ಲಿ ಜಯಗಳಿಸಿದೆ.

ಇದೇ ವೇಳೆ ನಿನ್ನೆ ನಡೆದ ಜನಸೇನಾ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಕ್ಷದ ಪವನ್ ಕಲ್ಯಾಣ್ ಅವರನ್ನು ಆಂಧ್ರಪ್ರದೇಶ ವಿಧಾನಸಭೆಯ ಸಭಾನಾಯಕರನ್ನಾಗಿ ಆಯ್ಕೆ ಮಾಡಲಾಯಿತು.

ಶಾಸಕ ಎನ್.ಮನೋಹರ್, ಸಭಾ ನಾಯಕನ ಸ್ಥಾನಕ್ಕೆ ಪವನ್ ಕಲ್ಯಾಣ್ ಅವರ ಹೆಸರನ್ನು ಸೂಚಿಸಿದರು. ಇದಕ್ಕೆ ಎಲ್ಲ ಶಾಸಕರು ಅವಿರೋಧವಾಗಿ ಬೆಂಬಲ ಸೂಚಿಸಿದರು. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿ ಎಂಬುದು ಇಲ್ಲ. ಅಮರಾವತಿ ಏಕೈಕ ರಾಜಧಾನಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version