ದಿನದ ಸುದ್ದಿ
9473 ಕೋಟಿ ರೂ. ಗಳ ನಬಾರ್ಡ್ ಸಾಲ ಯೋಜನೆ ಪ್ರಕಟ
ಸುದ್ದಿದಿನ,ಧಾರವಾಡ : 2021-22 ನೇ ಸಾಲಿನ ನಬಾರ್ಡ್ ಧಾರವಾಡ ಜಿಲ್ಲೆಗೆ ರೂಪಿಸಿರುವ 9473 ಕೋಟಿ ರೂ.ಗಳ ವಾರ್ಷಿಕ ಸಾಲ ಯೋಜನೆ ( Potential Linked Credit Plan ) ಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಇಂದು ಬಿಡುಗಡೆಗೊಳಿಸಿದರು.
ಕೃಷಿ ವಲಯಕ್ಕೆ ಶೇ.57.23 ರಷ್ಟು , ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಶೇ 34.07 ರಫ್ತು ವಲಯ, ಶಿಕ್ಷಣ ಹಾಗೂ ಗೃಹ ನಿರ್ಮಾಣ ಕ್ಷೇತ್ರಕ್ಕೆ ಶೇ. 7.83 ರಷ್ಟು ಈ ಯೋಜನೆಯಲ್ಲಿ ವರ್ಗಿಕರಿಸಲಾಗಿದೆ. ರೈತರ ಆದಾಯ ಹೆಚ್ಚಿಸಲು ಕೃಷಿ ಉತ್ಪನ್ನಗಳ ಒಗ್ಗೂಡಿಸುವಿಕೆ (collectivization of agricultural produce for enhancing farmer’s income ) ಎಂಬ ಧ್ಯೇಯವಾಕ್ಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243