ಸಿನಿ ಸುದ್ದಿ

ನಾಗರಹಾವಿನ ಆರ್ಭಟ ಚಿತ್ರದುರ್ಗದಲ್ಲಿ ಹೇಗಿತ್ತು ಗೊತ್ತಾ ?

Published

on

ಚಿತ್ರದುರ್ಗ: ಏಳುಸುತ್ತಿನ ಚಿತ್ರದುರ್ಗದ ಕೋಟೆಯಲ್ಲಿ 1972 ರಲ್ಲಿ ಚಿತ್ರೀಕರಣಗೊಂಡು ನಾಡಿನಾದ್ಯಂತ ಖ್ಯಾತಿಗಳಿಸಿದ ನಾಗರಹಾಾವು ಚಿತ್ರ 46 ವರ್ಷಗಳ ನಂತರ ಡಿ.ಟಿ.ಎಸ್.ಸೌಂಡ್‍ನೊಂದಿಗೆ ಮತ್ತೆ ತೆರೆಯ ಮೇಲೆ ಪ್ರದರ್ಶನಗೊಳ್ಳುತ್ತಿರುವುದರಿಂದ ಡಾ.ವಿಷ್ಣುವರ್ಧನ್‍ರವರ ಆದರ್ಶ ಬಳಗದವರು ಬಸವೇಶ್ವರ ಚಿತ್ರಮಂದಿರದ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಿನಿಮಾಸ್ಕೋಪ್, ರೀಕಲರ್ ಹಾಗೂ ರೀರೆಕಾರ್ಡ್‍ನೊಂದಿಗೆ ಮತ್ತೆ ಪ್ರದರ್ಶನಗೊಳ್ಳುತ್ತಿರುವ ನಾಗರಹಾವು ಚಿತ್ರ ವೀಕ್ಷಣೆಗೆ ಕೆಲವರು ಗ್ರಾಮೀಣ ಪ್ರದೇಶಗಳಿಂದ ಆಟೋಗಳಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಭಾವಚಿತ್ರವನ್ನು ಕಟ್ಟಿಕೊಂಡು ಆಗಮಿಸಿದ್ದರು. ಬೃಹಧಾಕಾರವಾದ ಕಟೌಟ್‍ಗೆ ದೊಡ್ಡಗಾತ್ರದ ಹೂಮಾಲೆಗಳನ್ನು ಹಾಕಲಾಗಿತ್ತು. ಅಭಿಮಾನಿಗಳು ವಿಷ್ಣು ಕಟೌಟ್‍ಗೆ ಕ್ಷೀರಾಭಿಷೇಕ ಮಾಡಿ ಕುಂಕುಮ ಇಟ್ಟರು.

ಡಾ.ವಿಷ್ಣುವರ್ಧನ್‍ರವರ ಆದರ್ಶ ಬಳಗದ ರಾಜ್ಯಾಧ್ಯಕ್ಷ ಸಿ.ಕೆ.ಗೌಸ್‍ಪೀರ್, ಉಪಾಧ್ಯಕ್ಷ ಪುಟ್ಟಣ್ಣ, ರಾಜ್‍ಕುಮಾರ್, ಸಂಘಟನಾ ಕಾರ್ಯದರ್ಶಿ ಪುನಿತ್ ಕಬ್ಬಿಣದ, ಬಾಬು, ಶೇಖ್‍ಕಲೀಂ, ಶೇಕ್ ಅಹಮದ್, ಜಿಕ್ರಿಯ, ಚಳ್ಳಕೆರೆ ತಿಪ್ಪೇಶಿ, ರಘು, ರಾಜು ಈ ಸಂದರ್ಭದಲ್ಲಿ ಹಾಜರಿದ್ದರು. ಡಾ.ವಿಷ್ಣುವರ್ಧನ್ ಅಭಿಮಾನಿ ಮೈಸೂರಿನ ಶಶಿಕುಮಾರ್ ನಾಗರಹಾವು ಚಿತ್ರ ವೀಕ್ಷಣೆಗೆ ಆಗಮಿಸಿದ್ದರು.

Leave a Reply

Your email address will not be published. Required fields are marked *

Trending

Exit mobile version