ದಿನದ ಸುದ್ದಿ

ಸಿ.ಎಚ್.ನಾಗೇಂದ್ರಪ್ಪ ನವಿಲೇಹಾಳು ಅವರಿಗೆ ರಾಷ್ಟ್ರೀಯ ಬಸವ ಪುರಸ್ಕಾರ

Published

on

ಸುದ್ದಿದಿನ, ಕಲಬುರ್ಗಿ: ತಾಲೂಕಿನ ಶ್ರೀ ಶುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ವತಿಯಿಂದ ನೀಡುವ 5ನೇ ವರ್ಷದ 2022 ನೇ ಸಾಲಿನ ‘ರಾಷ್ಟ್ರೀಯ ಬಸವ ಪುರಸ್ಕಾರ’ವನ್ನು ಬಸವ ಕಲ್ಯಾಣ ಸಮಿತಿ ಭದ್ರಾವತಿಯ ನವಚೇತನ ಕನ್ನಡ ಶಾಲೆಯ ಶಿಕ್ಷಕರಾದ ಸಿ.ಹೆಚ್.ನಾಗೇಂದ್ರಪ್ಪ ನವಿಲೇಹಾಳು ಅವರ ಹಾಲಕ್ಕಿ ನುಡಿತೈತೆ ಕವನ ಸಂಕಲನಕ್ಕೆ ನೀಡಿದೆ.

ಸಮಿತಿಯು ಪ್ರಶಸ್ತಿಗೆ ಪುಸ್ತಕಗಳನ್ನ ಆಹ್ವಾನಿಸಿತ್ತು. ಸುಮಾರು 37ಕ್ಕೂ ಹೆಚ್ಚು ವಿಭಾಗಗಳನ್ನಾಗಿ ಮಾಡಿ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಕೆಲವು ಕೃತಿಗಳನ್ನು ಆಯ್ಕೆ ಮಾಡಲಾಗಿದ್ದು, ಭದ್ರಾವತಿಯ ನವಚೇತನ ಕನ್ನಡ ಶಾಲೆಯ ಶಿಕ್ಷಕರಾದ ಸಿ.ಹೆಚ್.ನಾಗೇಂದ್ರಪ್ಪ ನವಿಲೇಹಾಳು ಅವರ ಹಾಲಕ್ಕಿ ನುಡಿತೈತೆ ಎನ್ನುವ ಕವನ ಸಂಕಲನಕ್ಕೆ ರಾಷ್ಟ್ರೀಯ ಬಸವ ಪುರಸ್ಕಾರ ಬಂದದ್ದು,ಇದು ಅವರ ಭೂಮಾತಾ ಪ್ರಕಾಶನ ಸಂಸ್ಥೆಯ ಹೆಮ್ಮೆಯ ಪ್ರಕಟಣೆಯಾಗಿದೆ.

ಪ್ರಶಸ್ತಿಗೆ ಭಾಜನರಾದ ಲೇಖಕ ಸಿ.ಹೆಚ್.ನಾಗೇಂದ್ರಪ್ಪ ಅವರಿಗೆ ಅಭಿನಂದಿಸುವಂತೆ ಭೂಮಾತಾ ಪ್ರಕಾಶನದ ಪ್ರಧಾನ ಕಾರ್ಯದರ್ಶಿಯಾದ ಮೈಬೂಬಸಾಹೇಬ.ವೈ.ಜೆ.ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಯುತರಿಗೆ ಜೂಲೈ 2 ನೇ ವಾರದಲ್ಲಿ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿ ಗೌರವಿಸಲಾಗುವುದೆಂದು ಬಸವ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.ಶ್ರೀಯುತರಿಗೆ ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಶಿಕ್ಷಕರು,ಸಾಹಿತಿಗಳು, ಬಂಧು-ಮಿತ್ರರು ಶುಭ ಕೊರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version