ದಿನದ ಸುದ್ದಿ
ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ನವಿಲೇಹಾಳು ಅವರಿಗೆ ‘ಕರುನಾಡ ಹಣತೆ ಸಾಧಕ ರತ್ನ ಪ್ರಶಸ್ತಿ’
ಸುದ್ದಿದಿನ ಡೆಸ್ಕ್ : ಭದ್ರಾವತಿ ಕಡದಕಟ್ಟೆಯ ನವಚೇತನ ಅನುದಾನಿತ ಕನ್ನಡ ಹಿ.ಪ್ರಾ.ಶಾಲೆಯ ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ನವಿಲೇಹಾಳುರವರ ಶಿಕ್ಷಣ ಕ್ಷೇತ್ರದಲ್ಲಿನ ಅಮೋಘ ಸೇವೆ,ಕನ್ನಡ ನಾಡು-ನುಡಿ,ಸಾಹಿತ್ಯ ಅಭಿರುಚಿ,ಸಮಾಜ ಸೇವೆಯನ್ನು ಗುರುತಿಸಿ,ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ವೇದಿಕೆ ಚಿತ್ರದುರ್ಗ ಶ್ರೀಯುತರನ್ನು ರಾಜ್ಯಮಟ್ಟದ ಕರುನಾಡ ಹಣತೆ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದೇ ಏಪ್ರಿಲ್ 24 ರಂದು ಭಾನುವಾರ ತ.ರಾ.ಸು.ರಂಗಮಂದಿರ ಚಿತ್ರದುರ್ಗದಲ್ಲಿ ನಡೆಯುವ ಅಖಿಲ ಕರ್ನಾಟಕ ಪ್ರಥಮ ಮಹಿಳಾ ಸಮ್ಮೇಳನ,ಲಾಂಛನ ಬಿಡುಗಡೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರುನಾಡ ಹಣತೆ ಕವಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕನಕ ಪ್ರೀತೇಶ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243