ದಿನದ ಸುದ್ದಿ
ಹೇಯ ಕೃತ್ಯ : ದಲಿತ ಮಹಿಳೆಯನ್ನು ಜೀತಕ್ಕೆಂದು ಎಳೆದೊಯ್ದ ನಾಗೇಶನೆಂಬ ನೀಚ..! ವಿಡಿಯೋ ನೋಡಿ
ಸುದ್ದಿದಿನ, ಮಂಡ್ಯ : ಜಿಲ್ಲೆಯ ಮದ್ದೂರು ತಾಲ್ಲೂಕು ಬೆಕ್ಕಳಲೆ ಗ್ರಾಮದ ದಲಿತ ಮಹಿಳೆ ಚಿನ್ನತಂಬಿ ಎಂಬಾಕೆಯನ್ನು ಜೀತ ಮಾಡಲಿಕ್ಕೆ ಬಲವಂತವಾಗಿ ಕಾರಿನಲ್ಲಿ ಎಳೆದೊಯ್ಯುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಾಲದ ಹಣ ವಾಪಾಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಮದ್ದೂರಿನ ಗೆಜ್ಜಲೆಗೆರೆ ಗ್ರಾಮದ ನಾಗೇಶ್ ಸೇರಿದಂತೆ ಆತನ ಸಹಚರರಾದ ಪಾಂಡು, ನಾಗೇಶ್, ಕರಿಯಪ್ಪ ಎಂಬುವವರು ಊರ ಜನರ ಎದುರೇ ಈ ನೀಚ ಕೃತ್ಯ ಎಸಗಿದ್ದಾರೆ.
ಘಟನೆ ವಿವರ
ಗೆಜ್ಜಲಗೆರೆಯ ನಾಗೇಶ್ ಎಂಬಾತ ನಿಂದ ದಲಿತ ಮಹಿಳೆ ಚಿನ್ನತಂಬಿಯ ಪತಿ 50ಸಾವಿರ ರೂ ಸಾಲ ಪಡೆದಿದ್ದ. ಸಾಲದ ಹಣವನ್ನು ತೀರಿಸಲಾಗದೆ ಈ ಮುಂಚೆ ನಾಗೇಶನ ಮನೆಯಲ್ಲಿ ಈ ದಲಿತ ಕುಟುಂಬವನ್ನು 4ವರ್ಷದಿಂದ ಜೀತದಾಳುಗಳಾಗಿ ಇಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದ. ನಂತರ ಈ ನಾಗೇಶ್ ಕೊಡುತ್ತಿದ್ದ ಕಿರುಕುಳ ತಾಳದೆ ದಲಿತ ದಂಪತಿಗಳು ತಮ್ನ ಊರಾದ ಬೆಕ್ಕಳೆಲೆ ಗ್ರಾಮಕ್ಕೆ ತಪ್ಪಿಸಿಕೊಂಡು ಬಂದಿದ್ದಾರೆ. ಇದಾಗಿ ಕೆಲವೇ ದಿನಗಳಲ್ಲಿ ಚಿನ್ನತಂಬಿಯ ಪತಿ ಸಾವನ್ನಪ್ಪಿದ್ದಾರೆ. ನಂತರ ಜೀತಕ್ಕಿಟ್ಟುಕೊಂಡಿದ್ದ ಈ ನಾಗೇಶ ಈ ಕುಟುಂಬ ಇರುವ ಸ್ಥಳವನ್ನು ಪತ್ತೆ ಹಚ್ಚಿ ದಲಿತ ಮಹಿಳೆ ಚಿನ್ನತಂಬಿಯನ್ನು ಬಲವಂತವಾಗಿ ಪಶುವಿಗಿಂತಲೂ ಕಡೆಯಾಗಿ ಮತ್ತೆ ಜೀತಕ್ಕೆ ಕರೆದಿಯ್ಯುವ ವೀಡಿಯೋ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮದ್ದೂರಿನ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401