ದಿನದ ಸುದ್ದಿ
ಮೊಳಕಾಲ್ಮೂರು ತಾಲ್ಲೂಕನ್ನು ಪ್ರಾಚೀನ ಬುಡಕಟ್ಟು ಕ್ಷೇತ್ರ ; ನೈಜ ವರದಿ ನೀಡುವಂತೆ ಮ್ಯಾಸಬೇಡ ಸಮಿತಿ ಮನವಿ
ಸುದ್ದಿದಿನ ಡೆಸ್ಕ್ : ಮೊಳಕಾಲ್ಮೂರು ತಾಲ್ಲೂಕನ್ನು ಪ್ರಾಚೀನ ಬುಡಕಟ್ಟು ಕ್ಷೇತ್ರ (Primitive Tribes) ಎಂದು ವಿಶೇಷ ಸ್ಥಾನಮಾನ ನೀಡುವ ಸಂಬಂಧ ಅಧ್ಯಯನ ಕೈಗೊಳ್ಳಲು ಸರ್ಕಾರ ಆದೇಶ ಮಾಡಿದ್ದು, ಸದರಿ ಅಧ್ಯಯನವನ್ನು ಮಾನವಶಾಸ್ತ್ರಜ್ಞರು, ಬುಡಕಟ್ಟಿನ ಸಾಂಸ್ಕೃತಿಕ ಇತಿಹಾಸಕಾರರು, ಭಾಷಾಶಾಸ್ತ್ರಜ್ಞರು, ಮತ್ತು ಒಬ್ಬ ಮ್ಯಾಸ ನಾಯಕ ಬುಡಕಟ್ಟಿನ ಸದಸ್ಯರನ್ನೊಳಗೊಂಡ ಸಂಶೋದನಾ ಸಮಿತಿಯನ್ನು ನೆಮಕ ಮಾಡಿ ನೈಜ ವರದಿಯನ್ನು ನೀಡುವಂತೆ ಕ್ರಮಕೈಗೊಳ್ಳಲು ಕೋರಿ ಮ್ಯಾಸ ಬೇಡ ಸಮಿತಿ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನ ಸಂಸ್ಥೆಯ ನಿರ್ದೇಶಕರಿಗೆ ಮನವಿ ಮಾಡಲಾಯಿತು.
ಮೂಲ ಲಕ್ಷಣ ಹೊಂದಿದ ಬುಡಕಟ್ಟು (Primitive Tribes) ನಾಯ್ಕಡ ಪಂಗಡದ ಮ್ಯಾಸ ನಾಯಕ, ಮ್ಯಾಸ ಬೇಡರ ಬುಡಕಟ್ಟು ಜನಾಂಗವನ್ನು ಭಾರತ ಸಂವಿಧಾನ ಭಾಗ 10ರ ವಿಧಿ 244(2) ಮತ್ತು 275(1) ಅನುಸೂಚಿ-6 ರಡಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕುನ್ನು ಮೂಲ ಲಕ್ಷಣ ಹೊಂದಿದ ಬುಡಕಟ್ಟು ಕ್ಷೇತ್ರ ಅಥವಾ ಪ್ರಾಚೀನ ಬುಡಕಟ್ಟು ಕ್ಷೇತ್ರ (Primitive Tribes) ಎಂದು ವಿಶೇಷ ಸ್ಥಾನಮಾನ ನೀಡುವ ಸಂಬಂಧ ವಿವಿಧ ಹಟ್ಟಿ, ಅಡವಿ ಗ್ರಾಮಗಳಲ್ಲಿ ಅಧ್ಯಯನ ಕೈಗೊಳ್ಳಲು ಸರ್ಕಾರ ಆದೇಶ ಮಾಡಿರುತ್ತದೆ.
ಸದರಿ ಅಧ್ಯಯನವನ್ನು ಮಾನವಶಾಸ್ತ್ರಜ್ಞರು ಮತ್ತು ಬುಡಕಟ್ಟಿನ ಸಾಂಸ್ಕೃತಿಕ ಇತಿಹಾಸಕಾರರು, ಭಾಷಾಶಾಸ್ತ್ರಜ್ಞರು ಹಾಗೂ ಒಬ್ಬ ಮ್ಯಾಸ ನಾಯಕ ಬುಡಕಟ್ಟಿನ ಸದಸ್ಯರನ್ನೊಳಗೊಂಡ ಸಂಶೋದನ ಸಮಿತಿಯನ್ನು ನೆಮಕ ಮಾಡಿ ನೈಜ ವರದಿಯನ್ನು ನೀಡುವಂತೆ ಕ್ರಮಕೈಗೊಳ್ಳಲು ಕೋರಿ ಈ ಮನವಿ ಮೂಲಕ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಒತ್ತಾಯಿಸುತ್ತೇವೆ.
ಬೇಡಿಕೆಗಳು
1) ಪ್ರಾಚೀನ ಮ್ಯಾಸ ಬೇಡರ, ಮ್ಯಾಸ ನಾಯಕ, ಬುಡಕಟ್ಟು ಕ್ಷೇತ್ರ (Primitive Myasa Bedar, Myasa Nayaka Tribes Pocket) ಎಂಬ ಶೀರ್ಷಿಕೆ ಅಡಿಯಲ್ಲಿ ಅಧ್ಯಯನ ಕೈಗೊಳ್ಳಬೇಕು.
2) ಮಾನವಶಾಸ್ತ್ರಜ್ಙರು ಮತ್ತು ಬುಡಕಟ್ಟಿನ ಸಾಂಸ್ಕೃತಿಕ ಇತಿಹಾಸಕರರು, ಭಾಷಾಶಾಸ್ತ್ರಜ್ಞರು ಹಾಗೂ ಒಬ್ಬರು ಮ್ಯಾಸ ನಾಯಕ ಬುಡಕಟ್ಟಿನ ಸದಸ್ಯರನ್ನೊಳಗೊಂಡ ಸಂಶೋಧನ ಅಧ್ಯಯನ ಸಮಿತಿಯನ್ನು ರಚಿಸಿಬೇಕು.
3) ಚಿತ್ರದುರ್ಗ,ಬಳ್ಳಾರಿ ವಿಜಯನಗರ ದಾವಣಗೆರೆ ಜಿಲ್ಲೆಗಳಲ್ಲಿ ಮ್ಯಾಸ ನಾಯಕ ಬುಡಕಟ್ಟು ಜನರು ಬಹುಸಂಖ್ಯಾತರಿದ್ದು , ಸದರಿ ಜಿಲ್ಲೆಗಳಲ್ಲಿ ಮ್ಯಾಸ ನಾಯಕ-ಮ್ಯಾಸ ಬೇಡರ ಬುಡಕಟ್ಟಿನ ಗುಡಿಕಟ್ಟೆಗಳು, ಕಟ್ಟೆಮನೆಗಳು , ದೇವರ ಎತ್ತುಗಳು ಮತ್ತು “ಮ್ಯಾಸ ನಾಯಕರ ಸಾಂಸ್ಕೃತಿಕ ವೀರರು ನೆಲೆಸಿರುವ ಕ್ಷೇತ್ರಗಳಿರುತ್ತವೆ.
4) ಮ್ಯಾಸ ನಾಯಕ “ನಾಯಕ” ಸಮಾನಾರ್ಥಕ ಪದವಾದ “ಮ್ಯಾಸ ನಾಯಕ” ಪದವನ್ನು ಓಬಿಸಿಪಟ್ಟಿಗೆ ಸೇರ್ಪಡೆ ಮಾಡಿರುವುದನ್ನು ಈ ಕೂಡಲೇ ತೆಗೆದುಹಾಕಬೇಕು.
5) ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ “ನಾಯಕ” ಸಮಾನಾರ್ಥಕ ಪದಗಳಾಗಿ “ಮ್ಯಾಸ ನಾಯ್ಕ”, “ಮ್ಯಾಸ ನಾಯಕ”, “ಮ್ಯಾಸ ಬೇಡ”, “ಮ್ಯಾಸ ಬ್ಯಾಡ್ರು”, “ಮ್ಯಾಸ ಬೇಡರ”, “ಮ್ಯಾಸರು” ಎಂಬ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243