ದಿನದ ಸುದ್ದಿ
ಶಿಕ್ಷಕರಿಗೆ ಕ್ರಿಯಾಶೀಲತೆ, ವೃತ್ತಿನಿಷ್ಠೆ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್
ಸುದ್ದಿದಿನ,ಚಿತ್ರದುರ್ಗ: ಶಿಕ್ಷಕರು ವೃತ್ತಿನಿಷ್ಠೆಯಿಂದ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಿದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಆಯೋಜಿಸಿದ್ದ ನಲಿಕಲಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪಠ್ಯ ವಿಷಯವನ್ನು ಹೊಸ ಚಿಂತನೆ, ಆಲೋಚನೆಯೊಂದಿಗೆ ಕಲಿಕಾ ಸಂಪನ್ಮೂಲಗಳನ್ನು ಬಳಸಿ ನಾವಿನ್ಯಯುತವಾಗಿ ಬೋಧಿಸುವುದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ. ನಮ್ಮ ವೃತ್ತಿಯಲ್ಲಿ ಬದ್ಧತೆ ಬೆಳೆಸಿಕೊಳ್ಳಬೇಕು. ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಗುರುತಿಸಿಕೊಂಡು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದಲ್ಲಿ ಎಲ್ಲಾ ಮಕ್ಕಳು ಸಾಧನೆ ಮಾಡಲು ಶಿಕ್ಷಕರು ಶ್ರಮಿಸಬೇಕು. ಎಂದರು.
ಸೇತುಬಂಧ ಚಟುವಟಿಕೆಗಳು, ಕಲಿಕಾ ಫಲಗಳನ್ನು ಆಧರಿಸಿದ ಚಟುವಟಿಕೆಗಳು, ನಲಿಕಲಿ ತರಗತಿ ಪ್ರಕ್ರಿಯೆಯಲ್ಲಿ ಮೌಲ್ಯಮಾಪನ ಮತ್ತು ದಾಖಲೆಗಳ ನಿರ್ವಹಣೆ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಲಾಯಿತು.
ನೋಡಲ್ ಅಧಿಕಾರಿಗಳಾದ ಎಸ್.ಜ್ಞಾನೇಶ್ವರ, ಯು.ಸಿದ್ದೇಶಿ, ಉಪನ್ಯಾಸಕರಾದ ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ಬಿ.ಎಸ್. ನಿತ್ಯಾನಂದ, ಎನ್.ಮಂಜುನಾಥ್, ಸಂಪನ್ಮೂಲ ವ್ಯಕ್ತಿಗಳಾದ ಆರ್.ಡಿ.ರವೀಂದ್ರ, ಪೂರ್ಣೇಶ, ರಂಗನಾಥ್, ಪ್ರಶಾಂತನಾಯ್ಕ, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಮತ್ತು ನಲಿಕಲಿ ತರಗತಿ ಶಿಕ್ಷಕರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243