ದಿನದ ಸುದ್ದಿ
ಸಿದ್ದಪ್ಪ ಹಂಚಿನಮನೆ ನಲ್ಕುದುರೆ ಅವರಿಗೆ ಸನ್ಮಾನ
ಸುದ್ದಿದಿನ, ಚನ್ನಗಿರಿ : ನಲ್ಕುದುರೆ ಗ್ರಾಮದಲ್ಲಿ ಎಪ್ರಿಲ್ 15 ರಂದು ನಡೆದ ಶ್ರೀ ವೀರಭದ್ರೇಶ್ವರ ಸಾರ್ವಜನಿಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭವನದ ನಿರ್ಮಾಣಕ್ಕಾಗಿ ವಿಶೇಷವಾಗಿ ಶ್ರಮಿಸಿರುವ ಹಿನ್ನೆಲೆಯಲ್ಲಿ ಸಮುದಾಯ ಭವನದ ಗೌರವ ಕಾರ್ಯದರ್ಶಿ, ನಿವೃತ್ತ ಶಿಕ್ಷಕರಾದ ನಲ್ಕುದುರೆ ಹೆಚ್. ವಿ ಸಿದ್ದಪ್ಪ ಹಂಚಿನಮನೆ ಅವರಿಗೆ ಭವನದ ಆಡಳಿತ ಮಂಡಳಿ ವತಿಯಿಂದ ಮತ್ತು ವಿವಿಧ ಸಂಘ ಸಂಸ್ಥೆ ಹಾಗೂ ಶಿಷ್ಯವೃಂದದವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದಪ್ಪ ಅವರು ಭವನ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಸಹಯೋಗ ನೀಡಿದ ಎಲ್ಲರನ್ನೂ ಸ್ಮರಿಸಿ ವಂದಿಸಿದರು.
ವೇದಿಕೆಯಲ್ಲಿ ಸಂಸದ ಡಾ. ಜಿ ಎಂ ಸಿದ್ದೇಶ್ವರ, ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ಮಾಜಿ ಶಾಸಕ ಕೆ ಶಿವಮೂರ್ತಿ, ಬಯಲು ಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಅಣಬೇರು ಜೀವನ್ ಮೂರ್ತಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243