ದಿನದ ಸುದ್ದಿ
‘ವಿಶ್ವದ ಬಲಿಷ್ಠ’ ಟಾಪ್ 10 ಪಟ್ಟಿಯಲ್ಲಿ ನಮೋ..!
ಸುದ್ದಿದಿನ, ನ್ಯೂಯಾರ್ಕ್: ವಿಶ್ವದ ವಿವಿಧ ಕ್ಷೇತ್ರದ ಅತಿ ಬಲಿಷ್ಟ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 10 ನೇ ಸ್ಥಾನ ಗಿಟ್ಟಿಸಿದ್ದಾರೆ.
ಹಾಗೆಯೇ, ಚೀನಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಪ್ರಥಮ ಸ್ಥಾನ ಪಡೆದಿದ್ದು, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ‘ಪದಚ್ಯುತಿ’ ಗೊಳಿಸಿ, 2ನೇ ಸ್ಥಾನಕ್ಕೆ ತಳ್ಳಿದ್ದಾರೆ. ಟಾಪ್ 75 ರ ಪಟ್ಟಿಯಲ್ಲಿ ಮೋದಿ 9 ನೇ ಸ್ಥಾನ ಪಡೆದಿದ್ದಾರೆ.
ಫೇಸ್‌ಬುಕ್ ನ ಸಿಇಒ ಮಾರ್ಕ್ ಜುಕರ್‌ಬರ್ಗ್ 13, ಬ್ರಿಟನ್ ಪ್ರಧಾನಿ ತೆರೇಸಾ ಮೇ 14, ಚೀನಾ ಪ್ರಧಾನಿ ಲೀ ಕೆಖಿಯಾಂಗ್ 15, ಆ್ಯಪಲ್ ಸಿಇಒ ಟಿಮ್ ಕುಕ್ 24 ನೇ ಸ್ಥಾನ ಗಳಿಸಿದ್ದಾರೆ.
ಪ್ರಸಿದ್ಧ ಉದ್ಯಮಿಯಾದ ಮುಕೇಶ್ ಅಂಬಾನಿ 32ನೇ ಸ್ಥಾನ ಗಳಿಸಿದ್ದು, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಅವರು 40 ನೇ ಸ್ಥಾನ ಪಡೆದಿರುವುದು ವಿಶೇಷ. ‘500 ರೂ. ಹಾಗೂ 1000 ರೂ. ನೋಟು ನಿಷೇಧ ಮೋದಿ ಅವರ ದಿಟ್ಟ ಕ್ರಮಗಳಲ್ಲಿ ಒಂದು’ ಎಂದು ಫೋರ್ಬ್ಸ್ ನಿಯತಕಾಲಿಕೆ ಕೊಂಡಾಡಿದೆ.