/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಜೂನಿಯರ್ ಎನ್‍ಟಿಆರ್ ತಂದೆ ಅಪಘಾತದಲ್ಲಿ ದುರ್ಮರಣ

Published

on

ಸುದ್ದಿದಿನ ಡೆಸ್ಕ್: ತೆಲುಗಿನ ಹಿರಿಯ ನಟ ಮಾಜಿ ಸಂಸದ ನಂದಮೂರಿ ಹರಿಕೃಷ್ಣ(61) ಅವರು ನಲ್ಲಗೊಂಡ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೂಲಗಳ ಪ್ರಕಾರ ನಲ್ಲಗೊಂಡ ಬಳಿ ಕಾರು ಪಲ್ಟಿ ಹೊಡೆದಿದ್ದು, ಸ್ಟೇರಿಂಗ್ ಬಲವಾಗಿ ಎದೆಗೆ ಬಡಿದ ಕಾರಣ ಅವರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ.

ನಂದಮೂರಿ ಅವರೊಂದಿಗೆ ಪ್ರಯಾಣ ಮಾಡುತ್ತಿದ್ದ ಇನ್ನಿಬ್ಬರೂ ಕೂಡ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಅಪಘಾತದ ಸಂದರ್ಭದಲ್ಲಿ ನಂದಮೂರಿ ಅವರೇ ಕಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಂದಮೂರಿ ಅವರು ಆಂಧ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಟ ಎನ್‍ಟಿಆರ್ ಅವರ ಪುತ್ರ ಹಾಗೂ ಆಂಧ್ರದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಾಮೈದುನ ಕೂಡ ಹೌದು.

ತೆಲುಗಿನ ಪ್ರಖ್ಯಾತ ನಟ ಜೂನಿಯರ್ ಎನ್‍ಟಿಆರ್ ಹಾಗೂ ನಂದಮೂರಿ ಕಲ್ಯಾಣ ರಾಮ್ ಅವರು ಇಬ್ಬರು ಮಕ್ಕಳು.

Leave a Reply

Your email address will not be published. Required fields are marked *

Trending

Exit mobile version