ರಾಜಕೀಯ
ಮೋದಿ ಬಳಿ ಆಧಾರ್ ಕಾರ್ಡ್ ಇಲ್ವೇ?: ನಮೋಗೆ ಹ್ಯಾಕರ್ ಚಾಲೆಂಜ್ !
ಸುದ್ದಿದಿನ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಆಧಾರ್ ಕಾರ್ಡ್ ಇಲ್ವೇ ಎಂಬ ಚರ್ಚೆಗಳು ಈಗ ಜಾಲತಾಣಗಳಲ್ಲಿ ಚುರುಕಾಗಿವೆ.
ಆರ್ ಎಸ್ ಶರ್ಮಾ ಅವರು ಆಧಾರ್ ಚಾಲೆಂಜ್ ನಲ್ಲಿ ಸೋತ ನಂತರ ಮೋದಿ ಕಡೆ ತಮ್ಮ ಬಾಣ ತಿರುಗಿಸಿರುವ ಹ್ಯಾಕರ್ ಗಳು ತಾಕತ್ತಿದ್ದರೆ ನಿಮ್ಮ ಆಧಾರ್ ಸಂಖ್ಯೆ ಬಹಿರಂಗಗೊಳಿಸುವಂತೆ ಸವಾಲು ಹಾಕಿದ್ದಾರೆ. ಬ್ರಾಕೆಟ್ ನಲ್ಲಿ ಆಧಾರ್ ಸಂಖ್ಯೆ ಇದ್ದರೆ ಎಂದು ಬರೆಯಲಾಗಿದೆ. ಇದರ ಅರ್ಥ ಪಿಎಂ ಬಳಿ ಆಧಾರ್ ಕಾರ್ಡ್ ಇಲ್ವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಟ್ರಾಯ್ ಅಧ್ಯಕ್ಷ ಆರ್ ಎಸ್ ಶರ್ಮಾ ಅವರು ಆಧಾರ್ ಸಂಖ್ಯೆ ಟ್ವೀಟ್ ಮಾಡಿದ ಬೆನ್ನಿಗೆ ಅದು ಹ್ಯಾಕ್ ಆಗಿತ್ತು.