ದಿನದ ಸುದ್ದಿ
ಇಂದು ‘ಚಂದ್ರಯಾನ-2 ವೀಕ್ಷಣೆ’ ಮಾಡಲಿದ್ದಾರೆ ಪ್ರಧಾನಿ ಮೋದಿ
ಸುದ್ದಿದಿನ,ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 70 ವಿದ್ಯಾರ್ಥಿಗಳ ಜೊತೆಗೂಡಿ ಇಸ್ರೋ ನಡೆಸಿರುವ ಚಂದ್ರಯಾನ-2 ಸಾಧನೆಯನ್ನು ವೀಕ್ಷಣೆ ಮಾಡಲಿದ್ದಾರೆ. ಚಂದ್ರಯಾನ-2 ನೌಕೆ ಚಂದಿರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆಗೆ (ಶನಿವಾರ ನಸುಕಿನಲ್ಲಿ) ಪಾದಾರ್ಪಣೆ ಮಾಡಲಿದೆ. ಪ್ರೌಢಶಾಲೆಗಳ 70 ವಿದ್ಯಾರ್ಥಿಗಳ ಜತೆಗೂಡಿ ನಗರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ಸಾಧನೆಯನ್ನು ವೀಕ್ಷಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್| 9980346243