ಲೈಫ್ ಸ್ಟೈಲ್
ಮೋದಿ ಮಾಡಿದ ಯೋಗದ ಗುಟ್ಟೇನು ಗೊತ್ತಾ?
ಫಿಟ್‌ನೆಸ್ ಚಾಲೆಂಜ್ ಬ್ರ್ಯಾಂಡ್ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮಾಡಿದ ಯೋಗದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ.
ಅವರು ಮಾಡಿದ ಯೋಗದ ಪಟ್ಟುಗಳ ಗುಟ್ಟೇನು ಎಂಬುದನ್ನು ಮೈಸೂರಿನ ಜಿಎಸ್‌ಎಸ್ ಯೋಗಿಕ್ ಫೌಂಡೇಶನ್‌ನ ಮುಖ್ಯಸ್ಥ ಶ್ರೀ ಹರಿ ಅವರು ವಿವರಿಸಿದ್ದಾರೆ.
ಮೋದಿ ಅವರು ಬಂಡೆ ಮೇಲೆ ಹಿಮ್ಮುಖವಾಗಿ ಮಲಗಿರುವುದನ್ನು ಯೋಗದಲ್ಲಿ ಅರ್ಧ ಚಕ್ರಾಸನ ಎಂದು ಕರೆಯುತ್ತೇವೆ. ಅರ್ಧ ಚಕ್ರಾಸನದಿಂದ ದೇಹದ ಭಾಗುವಿಕೆಯು ಸುಲಭವಾಗುತ್ತದೆ. ದೇಹದಲ್ಲಿ ರಕ್ತ ಸಂಚಲನ ಸುಲಭವಾಗುವುದರೆ ಜತೆಗೆ ಫ್ಲೆಕ್ಸಿಬಲಿಟಿ ಕಾಯ್ದುಕೊಳ್ಳಬಹುದು ಎಂದು ಅವರು ಸುದ್ದಿದಿನಕ್ಕೆ ತಿಳಿಸಿದ್ದಾರೆ.
ಬಂಡೆ ಮೇಲೆ ಒಂದು ಕಾಲಿಟ್ಟು ಮಾಡುತ್ತಿರುವ ವ್ಯಾಯಾಮವು ಏಕಪಾದ ಪ್ರಸರಣಾಸನವನನ್ನು ಹೋಲುತ್ತದೆ. ಅದನ್ನು ಅಶ್ವ ಸಂಚಲನಸನ ಎಂದೂ ಕರೆಯುತ್ತಾರೆ.
ಮೋದಿ ಅವರು ಆಸನದ ಜತೆಗೆ ಕೆಲವು ಮೂವ್‌ಮೆಂಟ್‌ಗಳನ್ನು ಸೇರಿಸಿದ್ದಾರೆ. ಮೋದಿ ಅವರ ನಡೆಗೆಯಲ್ಲಿ ಅದು ಕಾಣುತ್ತದೆ. ಹಿಂದೆ ಮಕ್ಕಳು ಕುಂಟೆ ಬಿಲ್ಲೆ ಆಡುತ್ತಿದ್ದರು. ಅದನ್ನೇ ಈ ಯೋಗ ವ್ಯಾಯಾಮದಲ್ಲಿ ಅಳವಡಿಸಲಾಗಿದೆ.
ಮಿದುಳು ಯಾವಾಗಲೂ ನಿಶ್ಚಲವಾಗಿ ಒಂದೇ ಕಡೆ ನಿಲ್ಲುವುದಿಲ್ಲ. ಅಲ್ಲಿ-ಇಲ್ಲಿ ವಾಲುತ್ತಲೇ ಇರುತ್ತದೆ. ಅದನ್ನೇ ಈ ನಡಿಗೆಯು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಅವರು. ಒಂದು ಮರದ ಸುತ್ತಲೂ ಮಣ್ಣು, ಮರಳು, ಕಲ್ಲುಗಳು, ಹುಲ್ಲು, ನೀರು ಹೀಗೆ ಕೆಲವು ಹಂತಗಳನ್ನು ನಿರ್ಮಿಸಲಾಗಿದೆ. ಈ ಎಲ್ಲದರ ಮೇಲೆ ನಡೆಯುವುದರಿಂದ ಪಾದಗಳಿಗೆ ಆಕ್ಯು ಪಂಚರ್, ಆಕ್ಯು ಪ್ರೆಶರ್ ಥೆರಪಿ ಆಗುತ್ತದೆ. ಮಧುಮೇಹ, ರಕ್ತದೊತ್ತಡ ಇದರಿಂದ ಕಡಿಮೆಯಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಸಾಮಾನ್ಯವಾಗಿ ಮಧುಮೇಹದಿಂದ ಬಳಲುವವರಿಗೆ ಹುಲ್ಲಿನ ಮೇಲೆ ನಡೆಯಲು ಹೇಳುತ್ತಾರೆ. ಹುಲ್ಲು ತಂಪಾಗಿರುತ್ತದೆ. ಅದರ ಮೇಲೆ ನಡೆದರೆ ನಮ್ಮ ದೇಹದಲ್ಲಿರುವ ಉಷ್ಣತೆ ಕಡಿಮೆಯಾಗುತ್ತದೆ. ಬದಲಾದ ಜೀವನ ಶೈಲಿಗೆ ಅನುಗುಣವಾಗಿ ಇದನ್ನೆಲ್ಲ ಯೋಗಕ್ಕೆ ಸೇರಿಸಲಾಗಿದೆ. ಹಿಂದೆ ನಮ್ಮ ತಾತಂದಿರು ಬರಿಗಾಲಲ್ಲಿ ನಡೆಯುತ್ತಿದ್ದರು. ಈಗ ನಾವು ಒಂದು ಸಣ್ಣ ಮುಳ್ಳು ಚುಚ್ಚಿದರೂ ತಡೆಯುವುದಿಲ್ಲ. ಆದರೆ, ಅವರು ಎಂಥ ಮುಳ್ಳು ಚುಚ್ಚಿದರೂ ಕೇರ್ ಮಾಡುತ್ತಿರಲಿಲ್ಲ. ಅವರಿಗೆ ಆ ಶಕ್ತಿ ಇತ್ತು. ಅದನ್ನು ಯೋಗದ ಮೂಲಕ ಜನರಿಗೆ ಮತ್ತೆ ಪರಿಚಯಿಸಲು ಇಂಥ ವ್ಯಾಯಾಮಗಳನ್ನು ಮಾಡಿಸಲಾಗುತ್ತದೆಯಂತೆ.
English summary: Narendra modi fitness tricks