ರಾಜಕೀಯ
ಬ್ರೇಕಿಂಗ್ : ನಾಳೆ ಗೂಗಲ್ ನಲ್ಲಿ ನಮೋ ಭಾಷಣ !
ಸುದ್ದಿದಿನ ಡೆಸ್ಕ್: ಇದು ಭಾರತೀಯರಿಗೆ ಖುಷಿಯ ವಿಚಾರ ! ಈ ಖುಷಿಗೆ ಗೂಗಲ್ ಕಾರಣ.
ಹೌದು, ನಾಳೆ ಸ್ವಾತಂತ್ರ್ಯ ದಿನದ ಅಂಗವಾಗಿ ಕೆಂಪುಕೋಟೆಯಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಗೂಗಲ್ ನೇರ ಪ್ರಸಾರ ಮಾಡಲು ಮುಂದಾಗಿದೆ. ಹೀಗಾಗಿ ತನ್ನ ಗೂಗಲ್ ಸರ್ಚ್‍ಪೇಜಿನ ಮುಖ್ಯ ಪುಟದಲ್ಲಿ ಮತ್ತು ಯುಟ್ಯೂಬ್‍ನಲ್ಲಿ ಮೋದಿಯವರ ಭಾಷಣವನ್ನು ಎಲ್ಲರೂ ಕೇಳಬಹುದು. ಗೂಗಲ್ ಸಂಸ್ಥೆ ಡಿಜಿಟಲ್ ಯೋಜನೆಯ ಮೂಲಕ ವೀಕ್ಷಕರನ್ನು ಸೆಳೆಯಲು ಪ್ರಸಾರ ಭಾರತಿ ಸಹಯೋಗದೊಂದಿಗೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಲೈವ್ ಸ್ಟ್ರೀಮ್ ನೀಡಲು ನಿರ್ಧರಿಸಿದೆ.