ದಿನದ ಸುದ್ದಿ
ಅತಿ ದೂರದ ನಕ್ಷತ್ರ ಪುಂಜ ಪತ್ತೆ: ಭಾರತದ ವಿಜ್ಞಾನಿಗಳನ್ನು ಅಭಿನಂದಿಸಿದ ನಾಸಾ
ಸುದ್ದಿದಿನ ಡೆಸ್ಕ್ : ಅತಿ ದೂರದ ನಕ್ಷತ್ರ ಪುಂಜವನ್ನು ಪತ್ತೆ ಮಾಡಿರುವ ದೇಶದ ಖಗೋಳ ವಿಜ್ಞಾನಿಗಳನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ‘ನಾಸಾ’ ಅಭಿನಂದಿಸಿದೆ.
ಭಾರತದ ಖಗೋಳ ವಿಜ್ಞಾನಿಗಳು ಗುರುತಿಸಿರುವ ನಕ್ಷತ್ರ ಪುಂಜವು ಭೂಮಿಯಿಂದ 930 ಕೋಟಿ ಜ್ಯೋತಿರ್ವರ್ಷ ದೂರದಲ್ಲಿದೆ. ಮನುಷ್ಯನ ತಿಳಿವಳಿಕೆಯನ್ನು ಇನ್ನಷ್ಟು ವಿಸ್ತರಿಸಲಿಕೊಳ್ಳುವ ಪ್ರಯತ್ನ ಈ ಅನ್ವೇಷಣೆಯಿಂದ ಸಾಧ್ಯವಾಗಲಿದೆ ಎಂದು ನಾಸಾ ಹೇಳಿದೆ. ಕನಕ್ ಸಾಹಾ ನೇತೃತ್ವದ ವಿಜ್ಞಾನಿಗಳ ತಂಡ ಎಯುಡಿಎಫ್‌ಎಸ್ 01 ಹೆಸರಿನ ನಕ್ಷತ್ರ ಪುಂಜ ಅನ್ವೇಷಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243