/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸ್ತಾ ಇದೆ ಅಪ್ಪು ‘ನಟಸಾರ್ವಭೌಮ’ ಟೀಸರ್..!

Published

on

ಸುದ್ದಿದಿನ ಡೆಸ್ಕ್ : ಕನ್ನಡದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಸಿನೆಮಾ ಕೂಡ ಒಂದು. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನೆಮಾದ ಟೀಸರ್ ಇಂದು ಬಿಡುಗಡೆಯಾಗಿದ್ದು ಕೋಟಿ ವೀವ್ಸ್ ಗಳತ್ತ ಮುನ್ನುಗುತ್ತ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ.

ಅಂದಹಾಗೆ ಈ ಸಿನೆಮಾದ ಪುನೀತ್ ರಾಜ್‍ಕುಮಾರ್ ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ಅಭಿನಯಿಸಿದ್ದು, ಕಾಮಿಡಿ ಪಾತ್ರದಲ್ಲಿ ಚಿಕ್ಕಣ್ಣ ಮಿಂಚಲಿದ್ದಾರೆ. ಡ್ಯಾನ್ಸ್ ಅನ್ನೇ ಕೇಂದ್ರವಾಗಿಟ್ಟುಕೊಂಡು ತಯಾರಾಗಿರುವ ಈ ಸಿನೆಮಾದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಅದ್ಭುತವಾದ ನೃತ್ಯದ ರಸದೌತಣವನ್ನು ಅಭಿಮಾನಿಗಳಿಗೆ ಉಣ ಬಡಿಸಲಿದ್ದಾರೆ.

ಟೀಸರ್ ನೋಡಿ

ಟೀಸರ್ ನಲ್ಲಿ ಪುನೀತ್ ರಾಜ್‍ಕುಮಾರ್ ಅವರ ನೃತ್ಯದ ತುಣುಕನ್ನು ನೋಡಿದರೆ ಮೇಲಿನ ಮಾತು ಸತ್ಯ ಎಂದು ತಿಳಿಯುತ್ತದೆ. ಏಕೆಂದರೆ ಪುನೀತ್ ರಾಜ್‍ಕುಮಾರ್ ಅವರ ನೃತ್ಯ ದ ತುಣುಕಿಗಾಗಿ ಅಭಿಮಾನಿಗಳು ಮತ್ತೆ ಮತ್ತೆ ಟೀಸರ್ ಅನ್ನು ನೋಡುತ್ತಲೇ ಇದ್ದಾರೆ.
ಒಟ್ಟಾರೆ ಈ ಸಿನೆಮಾ ಕನ್ನಡ ಚಿತ್ರರಂಗದ ಒಂದು ಆಲ್ ಟೈಮ್ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವೆನಿಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version