/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ವೈರಲ್ ಆಯ್ತು ‘ನಟಸಾರ್ವಭೌಮ’ ನ ಟ್ರೆಂಡ್ ಸೆಟ್ಟಿಂಗ್ ಹೇರ್ ಸ್ಟೈಲ್..!

Published

on

ವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ, ಪವನ್ ವಡೆಯಾರ್ ನಿರ್ದೇಶನದ ‘ನಟಸಾರ್ವಭೌಮ’ ಚಿತ್ರ ಅಕ್ಟೋಬರ್ 5 ಕ್ಕೆ ತೆರೆಕಾಣುತ್ತಿದ್ದು, ಅಪ್ಪು ಅಭಿಮಾನಿಗಳಲ್ಲಿ ಸಂತಸ ಮನೆ ಮಡಿದೆ.

ಅಪ್ಪು ಅಭಿಮಾನಿಗಳಿಗೆ ದಸರೆಯ ಸೂಪರ್ ಗಿಫ್ಟ್ ಆಗಿ ಬರಲಿರುವ ನಟಸಾರ್ವಭೌಮನ ಖದರ್ ಹೇಗಿದೆ  ಗೊತ್ತಾ..? ಇದರ ಫರ್ಸ್ಟ್ ಲುಕ್ ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು,

ನಟಸಾರ್ವಭೌಮ ನ ಬರುವಿಕೆಗೆ ಜನ ಕಾತುರರಾಗಿ ಕಾಯುತ್ತಿದ್ದಾರೆ. ರಚಿತಾರಾಮ್ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.

ಕನ್ನಡ ಚಿತ್ರರಂಗದ ಪವರ್ ಸ್ಟಾರ್, ನಮ್ಮ ಪ್ರೀತಿಯ ಅಪ್ಪು ಏನು ಮಾಡಿದರೂ ಅದರಲ್ಲಿ ಒಂದು ವಿಶೇಷ ಇದ್ದೇ ಇರುತ್ತದೆ. ‘ನಟಸಾರ್ವಭೌಮ’ ಚಿತ್ರ ಕ್ಕಾಗಿ ನಮ್ಮ ಪವರ್ ಸ್ಟಾರ್ ಮಾಡಿಸಿಕೊಂಡಿರುವ ಹೊಸ ಹೇರ್ ಸ್ಟೈಲ್ , ಪವರ್ ಸ್ಟಾರ್ ನ ಖದರ್ ಗೆ ಕನ್ನಡಿ ಹಿಡಿದಂತಿದೆ. ಈ ಸಖತ್ ಹೇರ್ ಸ್ಟೈಲ್ ನಲ್ಲಿ ಸಿಕ್ಕಾಪಟ್ಟೆ ಸೂಪರ್ ಆಗಿ ಮಿಂಚುತ್ತಿದ್ದಾರೆ ರಾಜವಂಶದ ರಾಜಕುಮಾರ.

ಇನ್ನು ತಮ್ಮ ಫೇವರಿಟ್ ಹೀರೋ ನ ಈ ಲುಕ್ ಗೆ ಫುಲ್ ಫಿದಾ ಆಗಿರುವ ಪವರ್ ಫ್ಯಾನ್ ಗಳು.. ತಾವೂ ಕೂಡ ಅಪ್ಪು ವಿನಂತೆಯೇ ಕೇಶವಿಸನ್ಯಾಸ ಮಾಡಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ವಯೋಮಾನದ ಬೇಧ ವಿಲ್ಲದೇ, ಚಿಕ್ಕ ಮಕ್ಕಳು, ಪಡ್ಡೆ ಗಳು, ಯುವಕರು.. ಎಲ್ಲರೂ ಈ ಪವರ್ ಹೇರ್ ಸ್ಟೈಲ್ಗೆ ಮಾರುಹೋಗಿದ್ದಾರೆ. ಇದರ ಝಲಕ್ ಇಲ್ಲಿದೆ ನೋಡಿ..

ಇನ್ನು ಚಿತ್ರದ ನಿರ್ದೇಶಕ ಪವನ್ ವಡೆಯಾರ್ ಕೂಡಾ ಇದೇ ರೀತಿಯ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದು, ನಟಸಾರ್ವಭೌಮ ಒಂದು ಟ್ರೆಂಡ್ ಸೆಟ್ಟಿಂಗ್ ಚಿತ್ರಾಗಿದೆ.

ಪವರ್ ಫ್ಯಾನ್ ಗಳ ಪ್ರಕಾರ ನಮ್ಮ ಅಪ್ಪು ಯಾವುದೇ ಹೊಸ ಚಿತ್ರ ದಲ್ಲೂ ಒಂದು ಹೊಸಾ ಟ್ರೆಂಡ್ ಇದ್ದೇ ಇರುತ್ತದೆ. ಹೌದಲ್ಲವೇ ಕರುನಾಡ ರಾಜಕುಮಾರನ ಪ್ರತಿ ಸಿನಿಮಾ ಕೂಡ ಒಂದು ಹೊಸಾ ದಾಖಲೆ ಬರೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version