/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಮಂಡ್ಯದಲ್ಲಿ ನಾಟಿ ಕೋಳಿ ಸಾರು ಮುದ್ದೆ ಉಣ್ಣುವ ಸ್ಪರ್ಧೆ

ಹೊಟ್ಟೆಬಾಕರಂತೆ ಉಣ್ಣುವ ತಾಕತ್ತು ನಿಂತಿದ್ದರೆ ನಿಮಗಿಷ್ಟ ಬಂದಷ್ಟು ಮುದ್ದೆ ಜತೆ ನಾಟಿ ಕೋಳಿ ಸಾರು ಸವಿಯಬಹುದು.

Published

on

ಸುದ್ದಿದಿನ ಡೆಸ್ಕ್: ನಾಟಿ ಕೋಳಿ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ.
ಹೊಟ್ಟೆಬಾಕರಂತೆ ಉಣ್ಣುವ ತಾಕತ್ತು ನಿಂತಿದ್ದರೆ ನಿಮಗಿಷ್ಟ ಬಂದಷ್ಟು ಮುದ್ದೆ ಜತೆ ನಾಟಿ ಕೋಳಿ ಸಾರು ಸವಿಯಬಹುದು.
ಮಂಡ್ಯದಲ್ಲಿ ಇದಕ್ಕೆಂದೇ ಒಂದು ವೇದಿಕೆ ಸಿದ್ಧವಾಗಿದೆ.
ತಾಲೂಕಿನ ಮಂಗಲ ಗ್ರಾಮದಲ್ಲಿ ಜು.1ರಂದು ಜಿಲ್ಲಾ ಮಟ್ಟದ ನಾಟಿ ಕೋಳಿ ಸಾರು-ರಾಗಿಮುದ್ದೆ ಉಣ್ಣುವ ಸ್ಪರ್ಧೆ ನಡೆಯಲಿದೆ. ಗ್ರಾಮೀಣ ಮತ್ತು ಜನಪದ ಕಲೆಗಳು, ಕ್ರೀಡೆಗಳು ನಶಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಗ್ರಾಮ್ಯ ಕಲೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ.
ಗ್ರಾಮದ ಶ್ರೀ ಮಾರಮ್ಮನ ದೇವಾಲಯ ಆವರಣದಲ್ಲಿ ಅಂದು ಮಧ್ಯಾಹ್ನ 1ಕ್ಕೆ ಸ್ಪರ್ಧೆ ಆರಂಭಗೊಳ್ಳಲಿದೆ. ಮೊದಲ ಐದು ಸ್ಥಾನಗಳ ವಿಜೇತರಿಗೆ 5000ರೂ.(ಪ್ರ), 3000ರೂ.(ದ್ವಿ), 2000ರೂ.(ತೃ) ಹಾಗೂ ಇಬ್ಬರಿಗೆ 1000ರೂ.(ಸಮಾಧಾನಕರ) ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದು. ಆಸಕ್ತರು ಸ್ಪರ್ಧೆ ಆರಂಭಕ್ಕೂ ಒಂದು ತಾಸು ಮೊದಲು ಸ್ಥಳದಲ್ಲೇ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು.
ವೀಕ್ಷಣೆಗೆ ಆಗಮಿಸುವವರು ನೂರು ರೂ. ನೀಡಿ ಟಿಕೆಟ್ ಪಡೆಯಬೇಕು.

Leave a Reply

Your email address will not be published. Required fields are marked *

Trending

Exit mobile version