ದಿನದ ಸುದ್ದಿ
ಪಾಕಿಸ್ತಾನದ ನೂತನ ಪ್ರಧಾನಮಂತ್ರಿ ಆಯ್ಕೆಗೆ ಇಂದು ನ್ಯಾಷನಲ್ ಅಸೆಂಬ್ಲಿ ಅಧಿವೇಶನ
ಸುದ್ದಿದಿನ ಡೆಸ್ಕ್ : ಪಾಕಿಸ್ತಾನದ ನೂತನ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡಲು ಅಲ್ಲಿನ ಸಂಸತ್ ’ನ್ಯಾಷನಲ್ ಅಸೆಂಬ್ಲಿ’ ಅಧಿವೇಶನ ಇಂದು ನಡೆಯಲಿದೆ.
ಪ್ರಧಾನಮಂತ್ರಿ ಹುದ್ದೆಗೆ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷ ಶೆಬಾಜ್ ಶರೀಫ್ ತಮ್ಮ ನಾಮಪತ್ರವನ್ನು ಇಂದು ಸಲ್ಲಿಸಿದ್ದಾರೆ. ಪಾಕಿಸ್ತಾನ್ ತೆಹರೀಕ್ ಇ ಇನ್ಸಾಫ್ ಪಕ್ಷದ ಶಾ ಮಹಮೂದ್ ಖುರೇಶಿ ಅವರೂ ನಾಮಪತ್ರ ಸಲ್ಲಿಸಿದ್ದಾರೆ.
ಪಾಕಿಸ್ತಾನದ 342ಸದಸ್ಯ ಬಲದ ಸಂಸತ್ತಿನಲ್ಲಿ ವಿಸ್ವಾಸ ಕಳೆದುಕೊಂಡ ನಂತರ ಇಮ್ರಾನ್ ಖಾನ್ ಅವರನ್ನು ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಯಾದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡು ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೊದಲ ಪ್ರಧಾನಿ ಎಂಬ ಇತಿಹಾಸಕ್ಕೆ ಇಮ್ರಾನ್ ಖಾನ್ ಮುನ್ನುಡಿ ಬರೆದಿದ್ದಾರೆ.
ನ್ಯಾಷನಲ್ ಅಸೆಂಬ್ಲಿಯಲ್ಲಿ ನಿನ್ನೆ ಅವಿಶ್ವಾಸ ನಿರ್ಣಯ ಮಂಡನೆಯಾದ ಸಂದರ್ಭದಲ್ಲಿ ನಿರ್ಣಯ ಪರವಾಗಿ 174ಮತಗಳು ಚಲಾವಣೆಯಾದ್ದರಿಂದ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಳ್ಳುವಂತಾಗಿದೆ. ಆಕಾಂಕ್ಷಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಸೆಂಬ್ಲಿ ಸಚಿವಾಲಯ ಹೇಳಿದೆ.
ನ್ಯಾಷನಲ್ ಅಸೆಂಬ್ಲಿ ಆಫ್ ಪಾಕಿಸ್ತಾನ ಟ್ವೀಟ್
Orders of the day for the meeting of the National Assembly to be held on Monday, the 11 th April, 2022 at 2.00 p.m.@appcsocialmedia @RadioPakistan @PTVNewsOfficial @PTV_Parliament pic.twitter.com/x8dsN6iSru
— National Assembly of Pakistan🇵🇰 (@NAofPakistan) April 10, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243