ಕ್ರೀಡೆ
ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ| ದಾವಣಗೆರೆಯ ಕ್ರೀಡಾಪಟು ‘ಕಾವೇರಿ’ ಗೆ ತೃತೀಯ ಸ್ಥಾನ
ಸುದ್ದಿದಿನ ಡೆಸ್ಕ್ | ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ನಗರಾಧ್ಯಕ್ಷರಾದ ಎನ್ ಟಿ. ಹನುಮಂತಪ್ಪ ನವರ ಪುತ್ರಿ ಎಚ್. ಕಾವೇರಿ ಅವರು ಇದೇ ತಿಂಗಳ 11 ಮತ್ತು 12 ನೇ ತಾರೀಖು ಬೆಂಗಳೂರಿನ ಕೋರಮಂಗಲದ ಇನ್ ಡೋರ್ ಸ್ಟೇಡಿಯಂನಲ್ಲಿನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಜಯಶೀಲರಾಗಿದ್ದಾರೆ.
ಇವರು ಸೇಂಟ್ ಪಾಲ್ಸ್ ಶಾಲೆಯಲ್ಲಿ ಒಂಬತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಗೆ ,ಕರ್ನಾಟಕ ರಾಜ್ಯಕ್ಕೆ ,ಭಾರತ ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401