ದಿನದ ಸುದ್ದಿ

ದಾವಣಗೆರೆ | ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ

Published

on

ಸಾಂದರ್ಭಿಕ ಚಿತ್ರ

ದಾವಣಗೆರೆ, ಸುದ್ದಿದಿನ: ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ (ಎನ್‍ಐಯುಎ) ಸಂಯುಕ್ತಾಶ್ರಯದಲ್ಲಿ ‘ಸ್ಮಾರ್ಟ್ ಸಿಟೀಸ್ : ಸ್ಮಾರ್ಟ್ ನಗರೀಕರಣ’ ಯೋಜನೆ ಪೂರ್ವ ಘಟನೆಯ ಚಟುವಟಿಕೆಯ ಭಾಗವಾಗಿ ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ ಏರ್ಪಡಿಸಿದ್ದು, ನಗರಗಳಲ್ಲಿ ಹವಾಮಾನ ಪರಿಣಾಮಗಳು ಹಾಗೂ ನಗರಗಳಲ್ಲಿ ಹವಾಮಾನ ಕುರಿತ ಕ್ರಮಗಳು, ಈ 2 ವಿಭಾಗಗಳಲ್ಲಿ ಛಾಯಾಚಿತ್ರಗಳನ್ನು ಫೆ. 15 ರ ಒಳಗಾಗಿ ಸಲ್ಲಿಸಬೇಕು ಎಂದು ಸ್ಮಾರ್ಟ್‍ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರು ಹೇಳಿದರು.

ನಗರಗಳಲ್ಲಿನ ಹವಾಮಾನದ ಪರಿಣಾಮಗಳು ಹಾಗೂ ನಗರಗಳಲ್ಲಿನ ಹವಾಮಾನ ಕ್ರಮಗಳು ವಿಷಯ ಕುರಿತ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಫೆ. 15 ರವರೆಗೆ ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ ರೂ. 10000, ದ್ವಿತೀಯ ಬಹುಮಾನ- ರೂ. 5000 ಹಾಗೂ ತೃತೀಯ ಬಹುಮಾನ ರೂ. 3000 ನೀಡಲಾಗುವುದು.

ಫೋಟೋ ಹಾಗೂ ವಿವರವನ್ನು smartcitydavanagere@gmail.com ಗೆ ಫೆ. 15 ರಂದು ಮಧ್ಯಾಹ್ನ 12 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರ ಹಾಗೂ ಮಾಹಿತಿಗೆ https://niua.org/c-cube/content/national-photography-competition ವೆಬ್‍ಸೈಟ್‍ನಿಂದ ಅಥವಾ ಸ್ಮಾರ್ಟ್‍ಸಿಟಿ ಕಚೇರಿ, ದಾವಣಗೆರೆ, 08192-222383 ಕ್ಕೆ ಸಂಪರ್ಕಿಸಬಹುದು.

ದಾವಣಗೆರೆ ನಗರದ ನಾಗರಿಕರು, ಯುವಜನತೆ ಹಾಗೂ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರು ಹೇಳಿದರು. ಸ್ಮಾರ್ಟ್‍ಸಿಟಿ ಯೋಜನೆ ಮುಖ್ಯ ಅಭಿಯಂತರ ಸತೀಶ್ ಅವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version