ಕ್ರೀಡೆ

ರಾಷ್ಟ್ರೀಯ ಮಹಿಳಾ ಹಾಕಿ ಟೂರ್ನಿ| ಅರುಣಾಚಲಪ್ರದೇಶ ವಿರುದ್ಧ ಕರ್ನಾಟಕ ತಂಡಕ್ಕೆ ಭರ್ಜರಿ ಗೆಲುವು

Published

on

ಸುದ್ದಿದಿನ ಡೆಸ್ಕ್ : ಭೋಪಾಲ್‌ನಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಸೀನಿಯರ್ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ವನಿತೆಯರು ಶುಭಾರಂಭ ಮಾಡಿದ್ದಾರೆ.

ಎಫ್ ಗುಂಪಿನಲ್ಲಿ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ 10-0 ಗೋಲುಗಳ ಭಾರೀ ಅಂತರದಲ್ಲಿ ಅರುಣಾಚಲಪ್ರದೇಶ ವಿರುದ್ಧ ನಿರಾಯಾಸ ಗೆಲುವು ದಾಖಲಿಸಿತು. ನಿನ್ನೆ ನಡೆದ ಇನ್ನಿತರ ಪಂದ್ಯಗಳಲ್ಲಿ ತಮಿಳುನಾಡು ತಂಡ ಅಂಡಮಾನ್-ನಿಕೋಬಾರ್ ವಿರುದ್ಧ 5-0 ಗೋಲುಗಳಿಂದ ಉತ್ತರ ಪ್ರದೇಶ ತಂಡ 8-0ಗೋಲುಗಳಿಂದ ಗೋವಾ ವಿರುದ್ಧ ಜಯಗಳಿಸಿದವು.

ದೆಹಲಿ ಆಟಗಾರ್ತಿಯರು 13-0ಗೋಲುಗಳಿಂದ ಗುಜರಾತ್ ವಿರುದ್ಧ ಹಾಗೂ ಒಡಿಶಾ ಮಹಿಳೆಯರು 14-0ಗೋಲುಗಳಿಂದ ತೆಲಂಗಾಣ ವಿರುದ್ಧ ಜಯಗಳಿಸಿ ಶುಭಾರಂಭ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version