ದಿನದ ಸುದ್ದಿ
ಭದ್ರಾವತಿ | ಕಡದಕಟ್ಟೆಯ ನವಚೇತನ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆ
ಸುದ್ದಿದಿನ,ಭದ್ರಾವತಿ : ಕಡದಕಟ್ಟೆಯ ನವಚೇತನ ವಿದ್ಯಾಸಂಸ್ಥೆಯ ನವಚೇತನ ಕನ್ನಡ,ನವಚೇತನ ಆಂಗ್ಲ ಮತ್ತು ದಿವ್ಯ ವಿದ್ಯಾಸಂಸ್ಥೆಯ ಕೆ.ಜಿ.ಆರ್ ಪ್ರೌಢಶಾಲೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ವಿದ್ಯಾರ್ಥಿಗಳು ಮತ್ತು ಮುಖ್ಯ ಶಿಕ್ಷಕರು,ಸಹ ಶಿಕ್ಷಕರು ಜೊತೆಗೂಡಿ ವಿಶ್ವ ಪರಿಸರ ದಿನಾಚರಣೆಯ ಆಚರಿಸಲಾಯಿತು.
ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಘೋಷ ವಾಕ್ಯಗಳ ನಾಮ ಫಲಕ ತಯಾರಿಸಿ ಶಾಲಾ ಆವರಣದಿಂದ ಕಡದಕಟ್ಟೆ, ಭಂಡಾರಹಳ್ಳಿ,ಐ.ಟಿ.ಐ ಮಾರ್ಗವಾಗಿ ಪರಿಸರ ದಿನಾಚರಣೆಯ ಜಾಥಾ ಮುಗಿಸಿ ನಂತರ ಶಾಲಾ ಕೈತೋಟದಲ್ಲಿ ಪೋಷಕರು,ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ವಿದ್ಯಾರ್ಥಿಗಳು ಜೊತೆಗೂಡಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತ್ತೆಂದು ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243