ದಿನದ ಸುದ್ದಿ
ನವಿಲೇಹಾಳು ಗ್ರಾಮ ಪಂಚಾಯತಿ : ಅಧ್ಯಕ್ಷೆ-ಉಪಾಧ್ಯಕ್ಷೆ ಆಯ್ಕೆ
ಸುದ್ದಿದಿನ, ದಾವಣಗೆರೆ : ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮಪಂಚಾಯತಿಯ ಅಧ್ಯಕ್ಷೆಯಾಗಿ ಶಬ್ನನಮ್ ಬಿ.ಎಚ್, ಉಪಾದ್ಯಕೆಯಾಗಿ ಈರಮಾಂಬ ಆಯ್ಕೆಯಾಗಿದ್ದಾರೆ.
2020ರ ಡಿಸೆಂಬರ್ 27 ರಂದು ನಡೆದ ಚುನಾವಣೆಯಲ್ಲಿ ಶಬ್ನಮ್ ಅವರು 416 ಮತ ಪಡೆದು ವಿಜೇತರಾಗಿದ್ದರು. ದೊಡ್ಡಘಟ್ಟದ ಈರಮಾಂಬ ಅವರು ಅವಿರೋಧವಾಗಿ ಆಯ್ಕೆ ಆಗಿದ್ದರು.
ಅಧ್ಯಕ್ಷಸ್ಥಾನಕ್ಕೆ ಮೀಸಲಾತಿ ಬಿ ಸಿ ಎಂ ಎ (ಮಹಿಳೆ), ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ನಿಗದಿಯಾಗಿತ್ತು.
ಶಬ್ನಮ್ ಹಾಗೂ ಮಮ್ತಾಜ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು 18 ಸದಸ್ಯರಲ್ಲಿ ಇಬ್ಬರು ಅಭ್ಯರ್ಥಿಗಳು ಒಬ್ಬತ್ತು ಮತಗಳ ಸಮಬಲದಲ್ಲಿದ್ದರು. ನಂತರ ಲಾಟರಿ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಉಪಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಈರಮಾಂಬ ಅವರು 11ಮತ ಮತ್ತು ರತ್ನಮ್ಮ 7 ಮತ ಪಡೆದರು. 11 ಮತ ಪಡೆದ ಈರಮಾಂಬ ಉಪಾಧ್ಯಕ್ಷೆಯಾಗಿ ಆಯ್ಕೆ ಆದರು ಎಂದು ಗ್ರಾಮಪಂಚಾಯತಿ ಮೂಲಗಳು ತಿಳಿಸಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243