ದಿನದ ಸುದ್ದಿ

ನವಿಲೇಹಾಳ್ ನಲ್ಲಿ ಮುಸ್ಲಿಂ ಬಾಂಧವರಿಂದ ಬಸವ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ, ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಬಸವ ಜಯಂತಿಯನ್ನು ಆಚರಿಸುವುದರ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.

ಇಂದು ರಂಜಾನ್ ಕಡೆದಿನ ನಮಾಝ್ ಮುಗಿಸಿ ಗ್ರಾಮ ಪಂಚಾಯತಿ ಎದುರು ಬಸವಜಯಂತಿ ಹಾಗೂ ರಂಜಾನ್ ಹಬ್ಬವನ್ನು ಹಿಂದೂ ಮುಸ್ಲಿಂ ಸಮುದಾಯದ ಇಬ್ಬರೂ ಸೇರಿ ಆಚರಿಸಿ ಭಾವೈಕ್ಯತೆಯನ್ನು ಮೆರೆದೆರು.

ರಂಜಾನ್ ಆಚರಣೆ

ಊರಿನ ಯುವ ಜನತೆ ಹೀಗೆ ಹಿಂದೂ – ಮುಸ್ಲಿಂ ಭಾವೈಕ್ಯತೆಯನ್ನು ಕಾಪಾಡಿಕೊಂಡು ಕುವೆಂಪು ಹೇಳಿದ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಮಾತನ್ನು ಆಚರಿಸಿ ಒಟ್ಟಾಗಿ ಬಾಳೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೋಸಿಮ್ ಅಕಿಲ್, ಶರ್ಮಾತ್ ಅಲಿ ಶಿಕ್ಷಕರು, ದಾದಪೀರ್ ಶಿಕ್ಷಕರು, ಮಂಜುನಾಥ್ ಕೆ, ಮಂಜುನಾಥ, ಬಷೀರ್, ದಾದಪೀರ್, ಯೂಸುಫ್, ನೂರುಲ್ಲ, ಮಸ್ತಾನ್, ಸಲೀಂ ಪೊಲೀಸ್, ಅಜಾರುದ್ದಿನ್, ನವಿಲೇಹಾಳ್ ಗ್ರಾಮದ, ಮುಸ್ಲಿಂ ಹಾಗೂ ಹಿಂದೂ ಸಹೋದರರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version