ದಿನದ ಸುದ್ದಿ

ನವಿಲೇಹಾಳ್ ಓದುಗರ ಬಳಗ | ಗ್ರಂಥಾಲಯ ಸದಸ್ಯರಿಗೆ ಉಚಿತ ಪುಸ್ತಕ ವಿತರಣೆ : ಸಂಪರ್ಕಿಸಿ

Published

on

ತ್ಮೀಯ ಗ್ರಂಥಾಲಯ ದ ಎಲ್ಲಾ ಸದಸ್ಯರೆ ಮತ್ತು ಹಿತೈಷಿಗಳೆ, ಈ ಮೂಲಕ ತಮ್ಮಲ್ಲಿ ತಿಳಿಯಪಡಿಸುವುದೇನೆಂದರೆ ಅಕ್ಟೋಬರ್ ೦9- 2020 ಕ್ಕೆ ಈ ನಮ್ಮ ‘ನವಿಲೇಹಾಳ್ ಓದುಗರ ಬಳಗ‘ ದ ‘ಗ್ರಂಥಾಲಯ‘ ಪ್ರಾರಂಭವಾಗಿ ಒಂದು ವರ್ಷವಾಗುತ್ತದೆ, ಗ್ರಂಥಾಲಯ ವನ್ನು ನಮ್ಮ ನಿರೀಕ್ಷೆಗೂ ಮೀರಿ ಸದ್ಬಳಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು.

ಇಲ್ಲಿಯವರೆಗೆ ನಮ್ಮ‌ ಗ್ರಂಥಾಲಯ ದ ಸದಸ್ಯರ ಸಂಖ್ಯೆ ಒಟ್ಟು – 46. ಅದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು- 24. ಸದಸ್ಯರಿದ್ದಾರೆ. ನಿಮ್ಮ ಸಲಹೆ ,ಪುಸ್ತಕ ಗಳ ಸದ್ಬಳಕೆ ಯಿಂದ ಗ್ರಂಥಾಲಯ ನಡೆಸಲು ನಮಗೆ ಇನ್ನಷ್ಟು ಉತ್ಸುಕತೆ ಬಂದಿದೆ‌.
ಅಂತೆಯೆ ಮೊದಲನೆ ವರ್ಷದ ಸಂಭ್ರಮ ಆಚರಣೆಯನ್ನು ಓದುಗರಾದ ನಿಮ್ಮ ಮನಸಂತೋಷ ಗೊಳಿಸಿ ಆಚರಿಸ ಬೇಕು ಎಂಬುದು ನಮ್ಮ ಇಚ್ಛೆ ಯಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ತಮಗೆ ಅವಶ್ಯಕತೆ ಇರುವ ಯಾವುದಾದರೂ ಒಂದು ಸ್ಪರ್ಧಾತ್ಮಕ ಪರೀಕ್ಷೆ ಗೆ ಸಂಬಂಧಿಸಿದ ಪುಸ್ತಕದ ಹೆಸರನ್ನು ನಮಗೆ ಎಸ್. ಎಮ್. ಎಸ್ /ವಾಟ್ಸಾಪ್/ ಫೋನ್ ಮೂಲಕ ತಿಳಿಸಬೇಕು , ಆ ಪುಸ್ತಕವನ್ನು ಗ್ರಂಥಾಲಯವು ನಿಮಗೆ ಉಚಿತ ವಾಗಿ ಕೊಡವುದರ ಮೂಲಕ ಮೊದಲ ವರ್ಷ ದ ಸಂಭ್ರಮ ವನ್ನು ಆಚರಿಸುತ್ತದೆ.

ವಿಶೇಷ ಸೂಚನೆ

  1. ಈ ಉಚಿತ ಪುಸ್ತಕ ವಿತರಣೆ ‘ನವಿಲೇಹಾಳ್ ಓದುಗರ ಬಳಗ’ದ ಗ್ರಂಥಾಲಯ ಸದಸ್ಯರು ಗಳಿಗೆ ಮಾತ್ರ.
  2. ನೀವು ಕೇಳುವ ಪುಸ್ತಕ ದ ಬೆಲೆ ಗರಿಷ್ಠ 500 ರೂಪಾಯಿ ವರೆಗೆ ಇರಬಹುದು.
  3. ನೀವು ಕೇಳುವ ಪುಸ್ತಕ ಸ್ಪರ್ಧಾತ್ಮಕ ಪರೀಕ್ಷೆಯದ್ದೆ ಆಗಿರಬೇಕು.
  4. ನೀವು ಯಾವ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದೀರಿ ಎಂದು ನಮಗೆ ದಾಖಲೆ ಒದಗಿಸಬೇಕು.
  5. ದಿನಾಂಕ 08 – 10 -2020 ರ ಸಂಜೆ 5-30 ರ ಒಳಗಾಗಿ ನಿಮಗೆ ಬೇಕಾಗಿರುವ ಪುಸ್ತಕ ದ ಹೆಸರು ಮತ್ತು ಆ ಪುಸ್ತಕ ದ ಲೇಖಕ ರ ಹೆಸರನ್ನ ತಿಳಿಸಬೇಕು.
  6. ಪುಸ್ತಕದ ಹೆಸರು ತಿಳಿಸಲು , ಎಸ್ ಎಮ್ ಎಸ್ ./ ಫೋನ್/ವಾಟ್ಸಾಪ್ , ಮಾಡಬೇಕಾದ ನಂಬರ್ ಗಳು 9481411880/. 9980346243/

ವಂದನೆಗಳೊಂದಿಗೆ

ಸನಾವುಲ್ಲ ನವಿಲೇಹಾಳ್
‘ನವಿಲೇಹಾಳ್ ಓದುಗರ ಬಳಗ’
ಗ್ರಂಥಾಲಯ ಮೊ ,ನಂ, 9481411880, 7975597086.

Trending

Exit mobile version