ಸಿನಿ ಸುದ್ದಿ

ತಮಿಳು ಸಿನಿಮಾ ರಂಗಕ್ಕೆ ನವಾಜುದ್ದಿನ್ ಸಿದ್ದಿಕಿ ಎಂಟ್ರಿ; ರಜನಿ ಜತೆ ಸಾಥ್

Published

on

ಸುದ್ದಿದಿನ ಡೆಸ್ಕ್:  ಬಾಲಿವುಡ್‌ನಲ್ಲಿ ಚಿತ್ರರಂಗದಲ್ಲಿ ಕಲಾತ್ಮಕ ಪಾತ್ರಗಳಿಗೆ ಬಣ್ಣ ಹಚ್ಚುವ ಮತ್ತು ಮನೋಜ್ಞ ಅಭಿನಯದಿಂದ ಗಮನ ಸೆಳೆದಿರುವ ನಟ ನವಾಜುದ್ದಿನ್ ಸಿದ್ದಿಕಿ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ.

ಅದು ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ. ಕಾರ್ತಿಕ ಸುಬ್ಬುರಾಜ್ ನಿರ್ದೇಶನದ ಸಿನಿಮಾ ತಲೈವಾರ್ 165ದ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ರಿಹರ್ಸಲ್ ಮಾಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ವಿರುದ್ಧವಾಗಿ ಕೆಲಸ ಮಾಡಲಿದ್ದು, ಈ ಚಿತ್ರದಲ್ಲಿ ವಿಜಯ್ ಸೇತುಪತಿ, ಸಿಮ್ರಾನ್, ತ್ರಿಷಾ, ಬಾಬಿ ಸಿನ್ಹಾ ಅಭಿನಯಿಸಲಿದ್ದಾರೆ. ನಿರ್ದೇಶಕ ಕಾರ್ತಿಕ್ ಸುಬ್ಬುರಾಜ ಪೋಸ್ಟ್ ಗೆ ಪ್ರತಿಕ್ರಿಸಿರುವ ಸಿದ್ದಿಕ್ಕಿ, ತಮಿಳು ಸಿನಿಮಾಗೆ ಎಂಟ್ರಿ ಕೊಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರನ್ನು ಕಾರ್ತಿಕ ಸ್ವಾಗತಿಸಿದ್ದಾರೆ‌. ಡಾರ್ಜಿಲಿಂಗ್‌, ಮಧುರೈ ಸೇರಿದಂತೆ ದೇಶದ ವಿವಿಧ ಲೋಕೇಷನ್ ಗಳಲ್ಲಿ ಚಿತ್ರಿಕರಣ ನಡೆಯಲಿದ್ದು, ಎಂದಿರಾನ್ ನಿರ್ಮಾಣ ಹೊಣೆ ಹೊತ್ತಿದ್ದ ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ.

ಚಿತ್ರಕ್ಕೆ ಅನಿರುಧ್ ರವಿಚಂದ್ರನ್ ಸಂಗೀತ ನೀಡಿದ್ದು, ತಿರು ಕ್ಯಾಮರಾ ಹಿಡಿದಿದ್ದಾರೆ. ಚಿತ್ರಕ್ಕೆ ತಲೈವಾರ್ 165 ತತ್ಕಾಲಿಕ ಹೆಸರಿಟ್ಟಿದ್ದು, ಈಚೆಗೆ ಬಿನ್ನಿ ಮಿಲ್ಸ್, ಚೆನ್ನೈ ಸ್ಥಳಗಳಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಲಾಗಿದೆ. ಕಾರ್ತಿಕ್ ಹಿಂದಿನ ಸಿನಿಮಾದಲ್ಲಿ ನಟಿಸಿದ್ದ ಸ್ಟಾರ್ ನಟರಾದ ಸನತ್ ಮತ್ತು ದೀಪಕ್ ಪರಮೇಶ್ ಅಭಿನಯಿಸಿದ್ದಾರೆ. ರಜನಿಕಾಂತರ ಸಿನಿನಾ 2.0 ನವೆಂಬರ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

Trending

Exit mobile version