ದಿನದ ಸುದ್ದಿ

ನೀರವ್ ಮೋದಿಗೆ ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ?

Published

on

ಸುದ್ದಿ ದಿನ ಡೆಸ್ಕ್: ನ್ಯಾಶನಲ್ ಬ್ಯಾಂಕ್‌ಗೆ ಹನ್ನೊಂದು ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಫಲಾಯನ ಮಾಡಿರುವ  ಗುಜರಾತ್ ಮೂಲದ ವಜ್ರದ ವ್ಯಾಪಾರಿ ನೀರ್ ಮೋದಿ ಅವರು ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಫಿನಾನ್ಷಿಯಲ್ ಟೈಮ್ಸ್ ಮಾಡಿರುವ ವರದಿಗಳ ಪ್ರಕಾರನ ನೀರವ್ ಅವರು ರಾಜಕೀಯ ಆಶ್ರಯ ಬಯಸಿ ಬ್ರಿಟನ್ ಸರಕಾರಕ್ಕೆ ಪತ್ರ ಬರೆದಿದ್ದು, ಒಂದು ವೇಳೆ ಅವರಿಗೆ ಅವಕಾಶ ಸಿಕ್ಕಲ್ಲಿ ನೀರವ್ ಅವರನ್ನು ರೆಡ್ ಕಾರ್ನರ್ ನೋಟಿಸ್ ಮೇರೆಗೆ ಭಾರತಕ್ಕೆ ಕರೆ ತರುವುದು ಕಷ್ಟವಾಗಬಹುದು.
ನೀರವ್ ಅವರ ಪತ್ರಕ್ಕೆ ಬ್ರಿಟನ್ ಸರಕಾರ ಸಮ್ಮತಿ ಕೊಡುವುದಕ್ಕೂ ಮುನ್ನವೇ ವಿದೇಶಾಂಗ ಕಾರ‌್ಯಾಲಯವು ಬ್ರಿಟನ್ ರಾಯಭಾರಿಯನ್ನು ಸಂಪರ್ಕಿಸಿದ್ದು, ಭಾರತದಲ್ಲಿ ನೀರವ್ ನಡೆಸಿರುವ ವಂಚನೆ ಪ್ರಕರಣಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಬ್ರಿಟನ್ ಸರಕಾರದ ಆಶ್ರಯ ಪಡೆದಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಭಾರತ ಸರಕಾರ ಮೇಲಿಂದ ಮೇಲೆ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಅದು ಸಾಧ್ಯವಾಗಿಲ್ಲ. ಈ ಮಧ್ಯೆ ನೀರವ್ ಮೋದಿ ಅವರೂ ಕೂಡ ಮಲ್ಯ ಅವರ ದಾರಿ ಹಿಡಿದಿದ್ದಾರೆ.
ನಕಲಿ ದಾಖಲೆಗಳನ್ನು ನೀಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನೀರವ್ ಮೋದಿ ಅವರು ಹನ್ನೊಂದು ಸಾವಿರ ಕೋಟಿ ರೂಪಾಯಿ ಸಾಲ ಪಡೆದಿದ್ದರು. ಅವರ ಸಮಬಂಧ ಮೆಹುಲ್ ಚೊಕ್ಸಿ ಅವರೂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರೂ ಕೂಡ ಫಲಾಯನವಾಗಿದ್ದಾರೆ. ಇವರಿಬ್ಬರೂ ಸೇರಿ ಎಸಗಿರುವ ಈ ವಂಚನೆ ಪ್ರಕರಣದ ಒಟ್ಟು ಮೌಲ್ಯ ಎರಡು ಶತಕೋಟಿ ಡಾಲರ್‌ಗಳು ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

Trending

Exit mobile version