ದಿನದ ಸುದ್ದಿ
ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ
ಸುದ್ದಿದಿನ,ಬಳ್ಳಾರಿ: 2020ನೇ ಸಾಲಿನ ನೀಟ್ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಬಳ್ಳಾರಿಯಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಸೆ.12ರಂದು ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಈಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಂಭೂಕಾರ್ ರಾಮರಾವ್ ಚಂದ್ರಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ಹೋಗುವ ಅಭ್ಯರ್ಥಿಗಳಿಗೆ ರಾತ್ರಿ 9.18ಕ್ಕೆ ಮತ್ತು 9.24ಕ್ಕೆ, ದಾವಣಗೆರೆ ಪರೀಕ್ಷಾ ಕೇಂದ್ರಕ್ಕೆ ರಾತ್ರಿ 10ಕ್ಕೆ ಮತ್ತು 11ಕ್ಕೆ, ಧಾರವಾಡ ಪರೀಕ್ಷಾ ಕೇಂದ್ರಕ್ಕೆ ರಾತ್ರಿ 9.30ಕ್ಕೆ ಮತ್ತು 10ಕ್ಕೆ, ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೆ 9.30ಕ್ಕೆ ಮತ್ತು 10ಕ್ಕೆ ಹಾಗೂ ಮೈಸೂರು ಪರೀಕ್ಷಾ ಕೇಂದ್ರಕ್ಕೆ ರಾತ್ರಿ 8.30ಕ್ಕೆ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಅಭ್ಯರ್ಥಿಗಳು www.KSRTC.in ಗೆ ಲಾಗ್-ಇನ್ ಆಗುವ ಮೂಲಕ ಆನ್ ಲೈನ್ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243