ದಿನದ ಸುದ್ದಿ
73 ವರ್ಷಗಳಿಂದ ಈಡೇರಿಲ್ಲ ನೇತಾಜಿ ಸುಭಾಷ್ ಚಂದ್ರ ಬೋಸರ ಮಗಳ ಬೇಡಿಕೆ: ಏನದು ಓದಿ..!
ಸುದ್ದಿದಿನ, ನವದೆಹಲಿ: ಸ್ವಾತಂತ್ರ್ಯ ಸೇನಾನಿ, ಮಹಾತ್ಮ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು ಭಾರತಕ್ಕೆ ತರಬೇಕು ಎಂದು ಅವರ ಮಗಳು ಅನಿತಾ ಬೋಸ್ ಅವರು ಭಾರತ ಮತ್ತು ಜಪಾನ್ ಸರ್ಕಾರಗಳಿಗೆ ಮತ್ತೆ ಮನವಿ ಮಾಡಿದ್ದಾರೆ.
ಅನಿತಾ ಬೋಸ್ ಅವರ ಪ್ರಕಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆಗಸ್ಟ್ 18, 1945 ರಂದು ಥೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಸೆಪ್ಟೆಂಬರ್ 1945 ರಿಂದ ಟೋಕಿಯೊ ದ ರೆನ್ಕೊಜಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಹದ ಅವಶೇಷಗಳನ್ನು ಸಂರಕ್ಷಿಸಲಾಗಿದೆ ಎಂಬುದು.
“ನನ್ನ ತಂದೆ ಮೃತಪಟ್ಟು 73 ವರ್ಷಗಳಿಂದ ಭಾರತ ಮತ್ತು ಜಪಾನ್ ಸರಕಾರಗಳಿಗೆ ನಾನು ಮನವಿ ಮಾಡುತ್ತಿದ್ದೇನೆ. ಆದರೆ ನನ್ನ ತಂದೆ ದೇಹದ ಅಡ್ಡಿಯನ್ನು ಮಾತೃಭೂಮಿಗೆ ತರುವ ಕಾರ್ಯವಾಗಿಲ್ಲ ” ಎಂದಿದ್ದಾರೆ.
ಸ್ವತಂತ್ರ ಭಾರತಕ್ಕೆ ಹಿಂದಿರುಗಲು ನನ್ನ ತಂದೆ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ ದುರದೃಷ್ಟವಶಾತ್ ಅದು ಪೂರೈಸಲಿಲ್ಲ. ಆದ್ದರಿಂದ ಅವರ ಅಸ್ಥಿ ಸ್ವತಂತ್ರ ಭಾರತದ ಮಣ್ಣನ್ನು ಸ್ಪರ್ಶಿಸಿದರೆ ಅವರ ಆಸೆ ಈಡೇರಿಸಿದಂತೆ ಆಗುತ್ತದೆ. ನನ್ನ ತಂದೆ ಹಿಂದೂ ಧರ್ಮದವರು. ಆದ್ದರಿಂದ ಗಂಗಾ ನದಿಯಲ್ಲಿ ಅವರ ದೇಹದ ಕನಿಷ್ಠ ಭಾಗವನ್ನು ಬಿಟ್ಟರೆ ಯೋಗ್ಯವಾಗಿರುತ್ತದೆ. ಆದ್ದರಿಂದ ನಾನು ಸರ್ಕಾರಗಳಿಗೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಟೋಕಿಯೋ ಮೂಲದ ಜಪಾನ್-ಇಂಡಿಯಾ ಅಸೋಸಿಯೇಷನ್ ಅಧ್ಯಕ್ಷರಾದ ಹಿರೋಶಿ ಹಿರಬಾಯಾಶಿ ಅವರು ನೇತಾಜಿಯ ಮರಣದ ಅವಶೇಷಗಳನ್ನು ಹಿಂದಿರುಗಿಸಲು ಭಾರತೀಯ ಸರ್ಕಾರವನ್ನು ಕೋರಿದ್ದಾರೆ. ಈ ಕುರಿತು ಭಾರತ ಸರ್ಕಾರ ಪ್ರಯತ್ನ ನಡೆಸಬೇಕಿದೆ ಎಂದು ಹೇಳಿದ್ದಾರೆ.