ದಿನದ ಸುದ್ದಿ
ದೇವೇಗೌಡ್ರು ಫಿಟ್ನೆಸ್ ಚಾಲೆಂಜ್ ಹಾಕಲ್ವಂತೆ
ಸುದ್ದಿದಿನ ಡೆಸ್ಕ್: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಯೋಗ ಮಾಡಿರುವ ವಿಡಿಯೊವೊಂದು ಭಾರಿ ಸದ್ದುಮಾಡಿದೆ. ನಾಲ್ಕನೇ ವಿಶ್ವ ಯೋಗ ದಿನದ ಅಂಗವಾಗಿ ಇಡೀ ವಿಶ್ವವೇ ಒಂದು ದಿನದ ಮಟ್ಟಿಗೆ ಯೋಗ ಮಾಡುತ್ತಿದ್ದರೆ ಗೌಡರು ತಾವು ದಿನವೂ ಮನೆಯಲ್ಲಿ ಯೋಗ ಮಾಡುತ್ತಿದ್ದು, ಯಾವುದೇ ಸಾಮೂಹಿಕ ಯೋಗ ಕಾರ‌್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಯೋಗ ಗುರು ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ಗೌಡರು ಯೋಗ ಮಾಡಿರುವ ವಿಡಿಯೊಗಳು ಜಾಲತಾಣಗಳಲ್ಲಿ ಸದ್ದುಮಾಡಿವೆ. 87ರ ಹರೆಯದಲ್ಲೂ ಯುವಕರೂ ನಾಚುವಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿ ತೋರಿಸಿದ್ದಾರೆ.
ಚೇಂಬರ್ ಆಫ್ ಕಾಮರ್ಸ್‌ನೋರು ಪ್ಯಾಲೆಸ್ ಗ್ರೌಂಡ್‌ನಲ್ಲಿ ಯೋಗ ಮಾಡ್ತಾವ್ರಂತೆ. ನನ್ನನ್ನೂ ಬನ್ನಿ ಅಂತ ಕರೆದ್ರು. ನಾನೇ ಯೋಗ ಮಾಡ್ತೀನಿ ಅಂತ ನಾನು ಹೇಳಿದ ಮೇಲೆ ಇತ್ತ ಸುಳಿದಿಲ್ಲ. ನಾನು ಹಲವಾರು ವರ್ಷಗಳಿಂದ ಯೋಗ ಮಾಡುತ್ತಿದ್ದೇನೆ. ಹಾಗಂತ ಪ್ರಧಾನಿ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕುತ್ತಿಲ್ಲ. ನಾನು ಯೋಗದೊಟ್ಟಿಗೆ ಡಯೆಟ್ ಕೂಡ ಪಾಲಿಸುತ್ತೇನೆ ಎಂದು ಗೌಡರು ತಿಳಿಸಿದರು.