ದಿನದ ಸುದ್ದಿ
ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗಾಗಿ ಪ್ರಕರಣಗಳ ಪಟ್ಟಿ ಮಾಡುವಾಗ ಹೊಸ ವಿಧಾನ ಅಳವಡಿಕೆ : ನ್ಯಾಯಮೂರ್ತಿ ಯು.ಯು. ಲಲಿತ್
ಸುದ್ದಿದಿನ ಡೆಸ್ಕ್ : ಸರ್ವೋನ್ನತ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಪ್ರಕರಣಗಳನ್ನು ( Case’s) ಪಟ್ಟಿ ಮಾಡಲು ಹೊಸ ವಿಧಾನ ಅನುಸರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ (Uday Lalit – Chief Justice of India )ಹೇಳಿದ್ದಾರೆ.ಹೊಸ ವಿಧಾನ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣವೊಂದರ ವಿಚಾರಣೆ ವೇಳೆ ಪ್ರಕರಣಗಳ ಪಟ್ಟಿ ಕುರಿತು ಸಾಲಿಸಿಟಿರ್ ಜನರಲ್ ತುಶಾರ್ ಮೆಹ್ತಾ ಅವರಿಗೆ ಈ ವಿಷಯ ತಿಳಿಸಿರುವ ಅವರು, ಪ್ರತಿಯೊಂದು ಪ್ರಕರಣದ ವಿಚಾರಣೆಗಾಗಿ ಪ್ರಕರಣಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆಯನ್ನು ಹತ್ತು ದಿನಗಳ ಮುಂಚಿತವಾಗಿ ಮಾಡಲಾಗುವುದು ಎಂದರು.
ಭಾರತದ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಯು.ಯು. ಲಲಿತ್ ಅವರು ಪ್ರಕರಣಗಳನ್ನು ಪಟ್ಟಿ ಮಾಡುವಾಗ ಹೆಚ್ಚಿನ ಪಾರದರ್ಶಕತೆಗೆ ಒತ್ತು ನೀಡುವುದಾಗಿ ತಿಳಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243