ದಿನದ ಸುದ್ದಿ
ಟೆರೇಸ್ ಮೇಲಿನಿಂದ ಬೋರ್ ವೆಲ್ ಕೊರೆಯುವ ಹೊಸ ತಂತ್ರಜ್ಞಾನ
ಮನೆ ಕಟ್ಟಿಸಿ ಆಯ್ತು ಕಾರ್ಪೊರೇಶನ್ನವರು ಸರಿಯಾಗಿ ನೀರು ಬಿಡೋಲ್ಲ. ಬೋರ್ ಕೊರೆಸಿಬಿಡೋಣ ಅಂದ್ರೆ ಬೋರ್ ಕೊರೆಯುವ ಲಾರಿ ಮನೆಯೊಳಗೆ ಹೋಗಲ್ಲ.
ಇಂಥ ಸಮಸ್ಯೆ ಹಲವರಿಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವೊಂದು ಬಂದಿದೆ. ಈಗ ನಿಮ್ಮ ಮನೆ ಟೆರೆಸ್ ಮೇಲಿನಿಂದಲೇ ಬೋರ್ ಕೊರೆಯಬಹುದಾಗಿದೆ.
https://youtu.be/mlDuhzm7t6I
ಈ ವಿನೂತನ ತಂತ್ರಜ್ಞಾನದ ಪ್ರಯೋಗ ನಡೆದಿರುವುದು ಚಿತ್ರದುರ್ಗದಲ್ಲಿ. ಈ ಕುರಿತ ವಿಡಿಯೊವೊಂದನ್ನು ಜಲ ತಜ್ಞ ದೇವರಾಜ್ ರೆಡ್ಡಿ ಅವರು ತಮ್ಮ ಫೇಸ್ಬುಕ್ ವಾಲ್ನಲ್ಲಿ ಹಂಚಿಕೊಂಡಿದ್ದಾರೆ.
ಬೋರ್ ಕೊರೆಯುವ ಎಂಜಿನ್ ವೊಂದನ್ನು ಮನೆ ಮೇಲೆ ಸಾಗಿಸಿ ಟೆರೆಸ್ಗೆ ಒಂದು ರಂದ್ರ ಕೊರೆದು ಆ ಹೋಲ್ನಿಂದ ಕೊಳವೆಯನ್ನು ಇಳಿ ಬಿಟ್ಟಿ ಬೋರ್ ಕೊರೆಯಲಾಗಿದೆ.