ರಾಜಕೀಯ
ಬಿಜೆಪಿ ನಾಯಕರ ‘ವರ್ಗಾವಣೆ ದಂಧೆ’ | ಸ್ಪೋಟಕ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ರೇವಣ್ಣ..!
ಸುದ್ದಿದಿನ ಡೆಸ್ಕ್ | ಬಿಜೆಪಿ ನಾಯಕರಿಗೆ ತಿರುಗೇಟು ನೀಡಲು ಸಚಿವ ರೇವಣ್ಣ ರೆಡಿಯಾಗಿದ್ದಾರೆ. ರೇವಣ್ಣ ಬಿಡುಗಡೆ ಮಾಡಲಿದ್ದಾರೆ ಸ್ಪೋಟಕ ದಾಖಲೆಗಳು. ಬಿಜೆಪಿ ನಾಯಕರ ವರ್ಗಾವಣೆ ದಂಧೆಯ ದಾಖಲೆಗಳು ರೇವಣ್ಣ ಬಳಿಯಿದ್ದು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದ್ದಾರೆ. ಹಲವು ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದಾರೆ ಬಿಜೆಪಿ ಮುಖಂಡರು.
ಹಣ ಪಡೆದುಕೊಂಡು ವರ್ಗಾವಣೆ ಧಂಧೆ ಮಾಡ್ತಾ ಇದ್ದಾರೆ ಅನ್ನೋ ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಲು ಮುಹೂರ್ತ ಫಿಕ್ಸ್ ಆಗಿದೆ.
ಈಶ್ವರಪ್ಪ ಶಿಫಾರಸ್ಸು ಮಾಡಿದ ಯಾರೆಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಅನ್ನೊ ದಾಖಲೆ ಬಿಡುಗಡೆ ಮಾಡಲು ಹೆಚ್ಡಿ ರೇವಣ್ಣ ರೆಡಿಯಾಗಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆ ಕೋರಿ ತಮಗೆ ಬರುತ್ತಿರುವ ಶಿಫಾರಸು ಪತ್ರಗಳನ್ನು ಸಂಗ್ರಹಿಸುತ್ತಿರುವ ರೇವಣ್ಣ.
ರೇವಣ್ಣಗೆ ಪತ್ರ ಬರೆದಿರುವ ಬಿಜೆಪಿ ನಾಯಕರು
ಶಿಫಾರಸು ಮಾಡಿರುವವರ ಹೆಸರು, ವರ್ಗಾವಣೆಗೆ ಸೂಚಿಸಿರುವ ಅಧಿಕಾರಿಯ ಹೆಸರನ್ನು ದಾಖಲೆ ಸಮೇತ ಸಿದ್ದಪಡಿಸಿರುವ ರೇವಣ್ಣ ಅವರು, ಬಿಜೆಪಿ ನಾಯಕರ ವರ್ಗಾವಣೆ ಶಿಫಾರಸ್ಸು ಪತ್ರ ಬಿಡುಗಡೆ ಮಾಡಲಿದ್ದಾರೆ. ರೇವಣ್ಣ ಕೈಯಲ್ಲಿದೆ 600 ಕ್ಕೂ ಹೆಚ್ಚು ಜನಪ್ರತಿನಿಧಿಗಳ ಲೆಟರ್ ಗಳಿವೆ. ಈ ಪೈಕಿ 270 ಅಧಿಕಾರಿಗಳನ್ನು ವರ್ಗ ಮಾಡಿರುವ ಸಂಪೂರ್ಣ ಮಾಹಿತಿ ಬುಕ್ ಲೆಟ್ ಗಳಿವೆ.
ಈ ಟ್ರಾನ್ಸ್ಫರ್ ಬುಕ್ ಬಾಂಬ್ ಸಿಡಿಸಲು ಮುಹೂರ್ತ ಹುಡುಕುತ್ತಿರುವ ರೇವಣ್ಣ. ಬಿಜೆಪಿ ನಾಯಕರ ಈ ನಡೆ ಬಗ್ಗೆ ಕೆಲ ಬಿಜೆಪಿ ನಾಯಕರು ತಮ್ಮ ಹೈಕಮಾಂಡ್ ಗೆ ದೂರು ನೀಡಲು ಮುಂದಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401