ದಿನದ ಸುದ್ದಿ

ಆನಗೋಡು | ಕಾಡು ಉಳಿಸಿ, ನಾಡನ್ನು ರಕ್ಷಿಸುವ ಹೊಣೆ ನಮ್ಮದು : ಜಿ.ಪಂ ಸದಸ್ಯ ಬಸವಂತಪ್ಪ

Published

on

ಸುದ್ದಿದಿನ,ದಾವಣಗೆರೆ : ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಗೋಡು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮೈದಾನದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವಂತಪ್ಪನವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಬಸವಂತಪ್ಪ ಅವರು, ಕಾಡು ಉಳಿಸಿ, ನಾಡನ್ನು ರಕ್ಷಣೆ ಮಾಡುವ ಹೊಣೆ ಪ್ರತಿಯೊಬ್ಬರ ಜವಾಬ್ದಾರಿ, ರೈತರು ಸಹ ತಮ್ಮ ಹೊಲಗಳ ಬದುಗಳಲ್ಲಿ ಮರಗಳನ್ನು ಬೆಳೆಸುವುದರಿಂದ ಮಳೆ ಹೆಚ್ಚಾಗಿ ಕೆರೆ, ಚೆಕ್ ಡ್ಯಾಂಗಳು ತುಂಬಿ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ರೈತರು ಸಹ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವಿಕುಮಾರ್, ಎಸ್‌ಡಿಎಂಸಿ ಅಧ್ಯಕ್ಷೆ ಚಂದ್ರಮ್ಮ, ಮುಖ್ಯೋಪಾಧ್ಯಾಯರು ಲೋಕಣ್ಣ ಮಾಗೋಡು, ಶಿಕ್ಷಕರಾದ ಸೋಮಶೇಖರ್ ಮತ್ತು ನಜೀರ್, ರುದ್ರೇಶ್, ಗ್ರಾಮದ ಮುಖಂಡರಾದ ಹಾಲಮ್ಮ, ನಸರುಲ್ಲಾ, ಬಸವರಾಜಪ್ಪ, ಮಕ್ಬುಲ್ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version