ದಿನದ ಸುದ್ದಿ
ಬಸವರಾಜ್ ವಿ ಶಿವಗಂಗಾ ಅವರಿಂದ ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಎನರ್ಜಿಪುಡ್ ವಿತರಣೆ
ಸುದ್ದಿದಿನ,ಚನ್ನಗಿರಿ : ತಾಲೂಕಿನದ್ಯಾಂತ ಪ್ರತಿ ಹಳ್ಳಿಗಳನ್ನು ಸುತ್ತಾಡಿ ಕೊವಿಡ್ -19 ನಿಂದಾಗಿ ಕೈಯಲ್ಲಿ ಕೂಲಿ ಕೆಲಸವಿಲ್ಲದೆ ಬಡ ದಲಿತ ಕುಟುಂಬಗಳಿಗೆ ನಾಲ್ಕನೇ ಬಾರಿಗೆ ಆಹಾರ ಕಿಟ್ಟುಗಳನ್ನು ದಾವಣಗೆರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ್ ವಿ ಶಿವಗಂಗಾ ಅವರು ವಿತರಿಸಿದ್ದಾರೆ.
ಸೋಮವಾರ ಚನ್ನಗಿರಿ ಸೇರಿದಂತೆ ,ಬಸವಾಪಟ್ಟಣಾ ಸಂತೇಬೆನ್ನೂರು ಪೋಲೀಸ್ ಠಾಣೆಗಳ ಎಲ್ಲಾ ಪೋಲಿಸ್ ಸಿಬ್ಬಂದಿಗಳಿಗೆ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಎಂದು ಎನರ್ಜಿ(ಚವನ್ ಪ್ರಾಶ್) ಇರುವ ಆಹಾರ ಪೊಟ್ಟಣಗಳನ್ನು ಬಸವರಾಜ್ ವಿ ಶಿವಗಂಗಾ ರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳು ಸೇರಿದಂತೆ ಸಂತೇಬೆನ್ನೂರು ಗ್ರಾಮದ ಮುಖಂಡರುಗಳಾದ ಸುರೇಶ್ , ಕೃಷ್ಣಮೂರ್ತಿ.ರಾಜು ಬಿಎನ್. ಹೈಕೊರ್ಟ ವಕೀಲರಾದ ಸುಭಾಷ್ , ಶಿವರಾಜ್ ಮತ್ತಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243