ಲೈಫ್ ಸ್ಟೈಲ್
ಸುದ್ದಿ ಪತ್ರಿಕಗಳೇ ಸುದ್ದಿಯಾಗುತ್ತಿವೆ..! ಕಾರಣ ?
ಪ್ರತಿ ದಿನ ಬೆಳಿಗ್ಗೆ ಎದ್ದೊಡನೆ ಬಿಸಿ ಬಿಸಿ ಕಾಫಿ ಸೇವಿಸುತ್ತಾ ದೇಶದ ಆಗುಹೋಗುಗಳ ಬಗ್ಗೆ ತಿಳಿಯಲು ನ್ಯೂಸ್ ಪೇಪರ್ ಓದುವ ಹವ್ಯಾಸ ನಮ್ಮಲ್ಲಿ ಹಲವರಿಗಿದೆ. ವಿಶೇಷ ಅಂದರೆ, ಸುದ್ದಿ ನೀಡುವ ಸುದ್ದಿ ಪತ್ರಿಕೆಗಳೇ ಸುದ್ದಿ ಆಗುತ್ತಿದೆ! ಇದೇನಪ್ಪಾ! ಎಂದು ಹುಬ್ಬೇರಿಸಬೇಡಿ, ನಾನು ಹೇಳುತ್ತಿರುವುದು , ಫ್ಯಾಷನ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿರುವ ನ್ಯೂಸ್ ಪ್ರಿಂಟ್ ಫ್ಯಾಷನ್ ಕುರಿತು.
ಗಾಬರಿ ಆಗಬೇಡಿ, ಇದು ಪರಿಸರ ಸ್ನೇಹಿ ಪೇಪರ್ ಉಡುಪುಗಳಲ್ಲ. ಅಪ್ಪಟ ನ್ಯೂಸ್ ಪೇಪರ್ ಪ್ರಿಂಟ್ ಇರುವ ಫ್ಯಾಬ್ರಿಕ್ ಡ್ರೆಸ್ಗಳು. ರೆಯಾನ್, ನೈಲಾನ್, ವಿನಿಲ್ , ಸಿಂಥೆಟಿಕ್, ಹೀಗೆ ಹಲವಾರು ಫ್ಯಾಬ್ರಿಕ್ ಗಳಲ್ಲಿ ನ್ಯೂಸ್ ಪ್ರಿಂಟ್ ಫ್ಯಾಷನ್ ಯುವಪೀಳಿಗೆಯ ಫೇವರಿಟ್ ಫಂಕೀ ಲುಕ್ ಎನಿಸಿಕೊಂಡಿದೆ.
ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿಯಲು , ಸದಾ ಬ್ಯಾಗ್ ನಲ್ಲಿರುತ್ತಿದ್ದ , ನ್ಯೂಸ್ ಪೇಪರ್, ಇಂದು ನ್ಯೂಸ್ ಪ್ರಿಂಟ್ ಫ್ಯಾಷನ್ ಹೆಸರಲ್ಲಿ ಯೂವಪೀಳಿಗೆಯ ಉಡುಪನ್ನಾವರಿಸಿದೆ. ಟಾಪ್, ಟ್ಯೂನಿಕ್, ಫ್ರಾಕ್, ಸಿಂಗಲ್ ಸ್ಟ್ರಾಪ್ ಡ್ರೆಸ್, ಲಾಂಗ್ ಗೌನ್, ಶೈಲಿಯ ನ್ಯೂಸ್ ಪ್ರಿಂಟ್ ಫ್ಯಾಷನ್ ಕಾಲೇಜು ಕ್ಯಾಂಪಸ್ ಗಳಲ್ಲಿ ಸುದ್ದಿ ಮಾಡುತ್ತಿದೆ.
ಈ ನ್ಯೂಸ್ ಪ್ರಿಂಟ್ ಖ್ಯಾತಿ ಕೇವಲ ಪಾಶ್ಚಾತ್ಯ ಉಡುಪುಗಳಿಗೆ ಮಾತ್ರ ಸೀಮಿತವಾಗಿರದೆ, ಭಾರತೀಯ ಸೊಗಡಿನ ಸೀರೆಗೂ ಲಗ್ಗೆ ಇಟ್ಟಿದೆ. ಹಲವಾರು ಫ್ಯಾಷನ್ ವಿನ್ಯಾಸಕರು ಈ ವಿಶಿಷ್ಟ ಟ್ರೆಂಡ್ ಸೃಷ್ಟಿಸುವಲ್ಲಿ ಯಶಸ್ವೀ ಆಗಿದ್ದಾರೆ. ಸುದ್ದಿ ಸಮಾಚಾರ ಸೀರೆಯ ಮೇಲೆ ಸುಂದರವಾಗಿ ಮುದ್ರಿಸಲಾಗಿದ್ದು, ಮಹಿಳಾಮಣಿಯರ ಕಿಟ್ಟಿ ಪಾರ್ಟಿ, ಗಳಲ್ಲಿ ಈ ಟ್ರೆಂಡ್ ಸೆಟ್ಟರ್ ಸೀರೆ ವೈರಲ್ ಆಗಿದೆ.
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243