ದಿನದ ಸುದ್ದಿ
ಪ್ರಮುಖ ಸಂಕ್ಷಿಪ್ತ ಸುದ್ದಿಗಳು
ಪ್ರಮುಖ ಸಂಕ್ಷಿಪ್ತ ಸುದ್ದಿಗಳು
- ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಅನಾವರಣಗೊಳಿಸಲಿದ್ದಾರೆ.
- ರಾಜ್ಯವನ್ನು 2025ರ ವೇಳೆಗೆ ಮಲೇರಿಯಾ ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು ಶೂನ್ಯ ಸ್ಥಾನೀಯ ಮಲೇರಿಯಾ ಹಂತಕ್ಕೆ ಉತ್ತರ ಕನ್ನಡ ಜಿಲ್ಲೆ ತಲುಪಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ ಹೇಳಿದ್ದಾರೆ. ವಿಶ್ವ ಮಲೇರಿಯಾ ದಿನದ ಹಿನ್ನೆಲೆಯಲ್ಲಿ ಮಲೇರಿಯಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಇಂದು ಮೈಸೂರಿನಲ್ಲಿ ಜರುಗಲಿದೆ. ಉಪ ಕುಲಪತಿ ಡಾ.ವಿದ್ಯಾಶಂಕರ್ ಮಾತನಾಡಿ, ಎ.ವಿ.ಎಸ್.ಮೂರ್ತಿ, ಈ.ಎಸ್.ಚಕ್ರವರ್ತಿ ಹಾಗೂ ಆನಂದ್ ಸಂಕೇಶ್ವರ್ ಅವರಿಗೆ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಲಾಗುವುದು ಎಂದರು.
- ಬೆಳಗಾವಿಯ ಡಾಕ್ಟರ್ ಬೆಟಗೇರಿ ಕೃಷ್ಣ ಶರ್ಮ ಟ್ರಸ್ಟ್‌ನ 2021-22ನೇ ಸಾಲಿನ ಪ್ರಶಸ್ತಿಗಳನ್ನು ಡಾಕ್ಟರ್ ಸಿ.ಎನ್.ರಾಮಚಂದ್ರನ್, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಮತ್ತು ಡಾಕ್ಟರ್ ಎನ್.ಆರ್.ನಾಯಕ್ ಅವರಿಗೆ ಮೈಸೂರಿನಲ್ಲಿ ಪ್ರದಾನ ಮಾಡಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243