ದಿನದ ಸುದ್ದಿ

ಸಮುದಾಯದ ಒಗ್ಗಟ್ಟು- ಶ್ರೇಯೋಭಿವೃದ್ಧಿಗೆ ‘ಯಜಮಾನ’ರುಗಳು ಶ್ರಮಿಸಬೇಕು : ಬೋದಿರತ್ನ ಭಂತೇಜಿ

Published

on

ಸುದ್ದಿದಿನ,ಟಿ.ನರಸೀಪುರ: ಸಮುದಾಯದ ಒಗ್ಗಟ್ಟು ಹಾಗೂ ಶ್ರೇಯೋಭಿವೃದ್ಧಿಗೆ ನೂತನವಾಗಿ ಆಯ್ಕೆಗೊಂಡ ಯಜಮಾನರುಗಳು ಶ್ರಮಿಸಬೇಕೆಂದು ನಳಂದ ಬುದ್ಧ ವಿಹಾರದ ಪೂಜ್ಯ ಬೋದಿರತ್ನ ಭಂತೇಜಿಯವರು ಆಶೀರ್ವಚಿಸಿದರು.

ಪಟ್ಟಣದ ತ್ರಿವೇಣಿ ನಗರದಲ್ಲಿರುವ ನಳಂದ ಬುದ್ಧ ವಿಹಾರಕ್ಕೆ ಹುಣ್ಣಿಮೆ ದಿನದಂದು ತ್ರಿವೇಣಿ ನಗರದಲ್ಲಿರುವ ಆದಿಕರ್ನಾಟಕ ಬಲಗೈ ಜನಾಂಗದ ಕುಲಕೂಟಕ್ಕೆ ಆಯ್ಕೆಯಾದಂತಹ 09 ಮಂದಿ ಯಜಮಾನರುಗಳಾದ ಶಿವಮಲ್ಲಯ್ಯ,ತುಂಬಲ ಪ್ರಕಾಶ್,ನರೇಂದ್ರಬಾಬು,ಶಿವರುದ್ರ , ಶಿವಯ್ಯ , ಎಂ.ನಾಗೇಂದ್ರಕುಮಾರ್, ಹೇಮಂತ್ ಕುಮಾರ್, ರಂಗದಾಸಯ್ಯ , ಹಾಗೂ ಜಗದೀಶ್ ರವರುಗಳನ್ನು ಆಮಂತ್ರಿಸಿ ಅವರುಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.

’ಯಜಮಾನ’ ಹುದ್ದೆ ಸುಲಭವಾಗಿ ದೊರಕುವಂತಹದಲ್ಲ ಅದಕ್ಕೆ ಅದರದೇ ಆದಂತಹ ಘನತೆ,ಗಾಂಭೀರ್ಯವಿದ್ದು ಇಂತಹ ಹುದ್ದೆಯನ್ನು ಅಲಂಕರಿಸಿರುವ ನೀವೆಲ್ಲರೂ ಅತ್ಯಂತ ಶಿಸ್ತುಬದ್ಧ ಹಾಗೂ ಪ್ರಾಮಾಣಿಕತೆಯಿಂದ ನಡೆದು ಸಮುದಾಯದ ಏಳಿಗೆಗೆ ಕಟಿಬದ್ದರಾಗಿ ದುಡಿಯಬೇಕು.ಆಗೆಯೇ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ಕರ್ತವ್ಯ ನಿರ್ವಹಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಬೇಕೆಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version