ಸಿನಿ ಸುದ್ದಿ

ಅರಮನೆಯಲ್ಲಿ ಫೋಟೊ ಶೂಟ್: ವಿವಾದಕ್ಕೆ ಸಿಲುಕಿದ ನಿಧಿ ಸುಬ್ಬಯ್ಯ

Published

on

ಸುದ್ದಿದಿನ ಡೆಸ್ಕ್: ಮೈಸೂರು ಅರಮನೆಯಲ್ಲಿ ನಟಿ ನಿಧಿ ಸುಬ್ಬಯ್ಯ ತೆಗೆಸಿರಿವ ಫೋಟೊ ವೈರಲ್ ಆಗಿದ್ದು, ವಿವಾದಕ್ಕೀಡಾಗಿದೆ.

ನಿಧಿ ಸುಬ್ಬಯ್ಯ ಅವರು ದರ್ಬಾರ್ ಹಾಲ್ ನಲ್ಲಿ ಫೋಟೊ ತೆಗಿಸಿದ್ದಲ್ಲದೆ ಇನ್ಸ್ ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಅನುಮತಿ ಇಲ್ಲದೆ ಫೋಟೊ ಶೂಟ್ ಮಾಡಿಸಿದ್ದು ಹೇಗೆಂಬುದು ಎಲ್ಲರ ಪ್ರಶ್ನೆ.
ಅಷ್ಟಕ್ಕೂ ಫೋಟೋಶೂಟ್​ಗೆ ಅವಕಾಶ ಕೊಟ್ಟಿದ್ಯಾರು..? ಸಾರ್ವಜನಿಕರಿಗೆ ಇಲ್ಲದ ಅವಕಾಶ ನಿಧಿ ಸುಬ್ಬಯ್ಯಗೆ ಸಿಕ್ಕಿದ್ದು ಹೇಗೆ..? ಒಂದು ವೇಳೆ ವಿಐಪಿ ಹಾಗೂ ಸೆಲೆಬ್ರಿಟಿಗಳಿಗೆ ಮಾತ್ರ ಫೋಟೋಶೂಟ್​ಗೆ ಅವಕಾಶ ಇದೆಯಾ ಎಂಬ ಅನುಮಾಗಳು ಸಾರ್ವಜನಿಕರನ್ನ ಕಾಡತೊಡಗಿದೆ.
ಅರಮನೆ ಆಡಳಿತ ಮಂಡಳಿ ಪದೇ ಪದೇ ಭದ್ರತಾ ವೈಫಲ್ಯದಿಂದ ಒಂದಲ್ಲ ಒಂದು ಯಡವಟ್ಟುಗಳನ್ನ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಅರಮನೆಯಲ್ಲಿ ಫೋಟೋಶೂಟ್ ಬಗ್ಗೆ ಆಡಳಿತ ಮಂಡಳಿ ಹಾಗೂ ಆರಕ್ಷಕರ ನಡುವೆ ಗೊಂದಲವಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

Trending

Exit mobile version