ದಿನದ ಸುದ್ದಿ
ಕೇರಳದಲ್ಲಿ ಮತ್ತೆ ನಿಫಾ ವೈರಸ್ ಸೋಂಕು
ಸುದ್ದಿದಿನ,ನವದೆಹಲಿ: ಕೇರಳದಲ್ಲಿ ಕಳೆದ ವರ್ಷ 17 ಜನರನ್ನ ಬಲಿ ಪಡೆದಿದ್ದ ನಿಫಾ ವೈರಸ್ ಸೋಂಕು ಮತ್ತೆ ಕಾಣಿಸಿಕೊಂಡಿದೆ. ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ನಿಫಾ ಸೋಂಕು ತಗುಲಿರುವುದನ್ನು ಸರ್ಕಾರ ದೃಢಪಡಿಸಿದೆ.
ಯುವಕನ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ಆತನಲ್ಲಿ ವೈರಸ್ ಇರುವುದನ್ನ ಖಚಿತಪಡಿಸಿದೆ. ಇನ್ನು ಈ ವ್ಯಕ್ತಿಯ ಸುತ್ತಮುತ್ತ ಇದ್ದ ಇಬ್ಬರು ನರ್ಸ್ಗಳು ಸೇರಿದಂತೆ ಇತರೆ ನಾಲ್ವರಲ್ಲಿ ಜ್ವರ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಆದ್ರೆ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಸೋಂಕು ತಗುಲಿರುವುದು ದೃಢಪಡಿಸಿದುವುದಕ್ಕೂ ಮುನ್ನವೇ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243