/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ನೆಲದನಿ

ಮೈಸೂರು ನಿರಂತರ ‘ರಂಗ ಉತ್ಸವ’

Published

on

ಮೈಸೂರಿನ ನಿರಂತರ ರಂಗ ತಂಡದಿಂದ ರಾಜ್ಯಮಟ್ಟದ ಐದು ದಿನಗಳ ನಿರಂತರ ರಂಗೋತ್ಸವ ಪ್ರಾರಂಭವಾಗಿದೆ. ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡರವರು ನಿರಂತರ ರಂಗೋತ್ಸವವನ್ನು ಉದ್ಘಾಟಿಸಿದ್ದು. ಇಂದು ಮೂರು ಕಾಸಿನ ಸಂಗೀತ ನಾಟಕ ಪ್ರದರ್ಶನ ಗೊಂಡಿದೆ. ಇನ್ನು ನಾಲ್ಕು ದಿನಗಳು ಮೊಕಾಮ್ ಪೋಸ್ಟ್‌ ಬೊಂಬಿಲವಾಡಿ, ಚೋಮನ ದುಡಿ, ಮೊದಲೆ ನೆನೆದೇವು, ಹಾಗು ಸಂದೇಶ ಸಾಮ್ರಾಜ್ಯ ನಾಟಕ ಪ್ರದರ್ಶನಗೊಳ್ಳಲಿವೆ. ಇನ್ನು ಈ ರಂಗೋತ್ಸವಕ್ಕೆ ರಾಜ್ಯಾದ್ಯಂತ ಹಲವು ಕಡೆಗಳಿಂದ ರಂಗಾಸಕ್ತತರು ಭಾಗವಹಿಸಲಿದ್ದು. ಮೈಸೂರಿನ ರಂಗಾಸಕ್ತತರಿಗೆ ಹಬ್ಬದ ವಾತಾವರಣಗಲಿದೆ.

ಭಾರತೀಯ ಕಲಾ ಪರಂಪರೆಯಲ್ಲಿ ರಂಗಭೂಮಿಗೆ ಅತ್ಯಂತ ಮಹತ್ವದ ಸ್ಥಾನ. ಜನರ ನೋವು ನಲಿವು, ದುಃಖ ದುಮ್ಮಾನ, ಸಿಟ್ಟು ಸೆಡವು ಎಲ್ಲವುಗಳ ನೇರ ಅಭಿವ್ಯಕ್ತಿ ರಂಗಭೂಮಿಯಲ್ಲಿ ಸಾಧ್ಯ. ಅಂತೆಯೇ ಮನುಷ್ಯನ ಅಂತರಂಗಕ್ಕೂ ಬಹಿರಂಗಕ್ಕೂ ನೇರ ಮುಖಾಮುಖಿ ಈ ರಂಗಭೂಮಿ. ಹಾಗಾಗಿಯೇ ಇದು ಮನುಷ್ಯನ ಸಾಧ್ಯತೆಗಳ ತಿಳಿವಿನ ವಿಸ್ತ್ತರಣೆಯೂ ಹೌದು.

ನಿರಂತರ ‘ರಂಗ ಉತ್ಸವ’ ಇಂಥ ಸಾಧ್ಯತೆಗಳ ವಿಸ್ತರಣೆಯಾಗಿ ಹೊರಹೊಮ್ಮಿದೆ. ಇದು ಕನ್ನಡದ ರಂಗ ಚಳುವಳಿಗೆ ನಿರಂತರದ ಅಳಿಲು ಪಾಲು. ರಾಜ್ಯದ ಹಾಗೂ ಹೊರ ರಾಜ್ಯಗಳ ರಂಗ ಕ್ರಿಯೆಗಳನ್ನು, ಚಟುವಟಿಕೆಗಳನ್ನು ಮೈಸೂರಿನಲ್ಲಿ ಆವಿರ್ಭವಿಸಿಕೊಳ್ಳುವ ಒಂದು ಪ್ರಯತ್ನವಾಗಿ ಮುಂದುವರಿದು ಯಶಸ್ಸನ್ನೂ ಕಂಡಿದೆ. ಭಾರತದ ಸಾಂಸ್ಕøತಿಕ ಕೊಡುಕೊಳ್ಳುವಿಕೆಯಲ್ಲಿ ಈ ರಂಗ ಉತ್ಸವ ಮಹತ್ವದ ಸ್ಥಾನ ನಿಭಾಯಿಸಿದೆ. ಭಿನ್ನ ಭಿನ್ನ ಪ್ರಾದೇಶಿಕ ನೆಲೆಗಳಲ್ಲಿ ಅಭಿವ್ಯಕ್ತಿಯೊಂದು ರೂಪು ತಳೆಯುವ ಬಗೆಯನ್ನು ಅದು ವ್ಯಕ್ತಪಡಿಸುವ ಸಾಂಸ್ಕøತಿಕ ಚಲನಶೀಲತೆಯನ್ನು ಕಾಣುವ, ಕಂಡು ಅರಿಯುವ ಪ್ರಯತ್ನವಾಗಿ ನಿರಂತರ ‘ರಂಗ ಉತ್ಸವ’ ಕಳೆದ ಒಂಬತ್ತು ವರ್ಷಗಳಿಂದ ಸಾಕಾರಗೊಳ್ಳುತ್ತಾ ಬಂದಿದೆ. ಇದು ಹತ್ತನೇ ರಂಗ ಉತ್ಸವ.

ಇದೊಂದು ಸಾಂಸ್ಕøತಿಕ ಹಬ್ಬ. ಐದು ದಿನಗಳ ಕಾಲ ಶ್ರೇಷ್ಠ ನಾಟಕಗಳು, ನಿರ್ದೇಶಕರು, ದೇಶದ ನಾನಾ ಭಾಗಗಳ ಕಲಾವಿದರು ಒಂದೆಡೆ ಸೇರಿ ಬೆರೆಯುವ ಹಾಗೂ ಪರಸ್ಪರ ಕೊಡು ಕೊಳ್ಳುವ ರಂಗ ಹಬ್ಬ. ಪ್ರತೀ ರಂಗ ಉತ್ಸವವೂ ಸಹ ನಾಡಿನ ಹೆಸರಾಂತ ಮತ್ತು ಸಂವೇದನಾಶೀಲ ವ್ಯಕ್ತಿಗಳಿಂದ ಉದ್ಘಾಟನೆಗೊಂಡು ಮುಂದುವರಿಯುತ್ತದೆ.

2009 ರಲ್ಲಿ ಆರಂಭವಾದ ರಂಗ ಉತ್ಸವವು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ‘ಚಂದ್ರಶೇಖರ ಕಂಬಾರ’ರಿಂದ ಉದ್ಘಾಟನೆಗೊಂಡು, ರಂಗಭೀಷ್ಮ ಬಿ ವಿ ಕಾರಂತರು ನಿರ್ದೇಶಿಸಿದ ಗೋಕುಲ ನಿರ್ಗಮನ ಮತ್ತು ಬ್ರೆಕ್ಟ್‍ನ ಮದರ್ ಕರೇಜ್ ಹಾಗೂ ಅಂಬೆ ಅಂಬಿಕೆ ಎಂಬ ನಾಡಿನ ಪ್ರಮುಖ ನಾಟಕಗಳು ಪ್ರದರ್ಶಿತಗೊಂಡವು. ಇನ್ನು ಎರಡನೇ ಉತ್ಸವವು 2010 ರಲ್ಲಿ ಖ್ಯಾತ ರಂಗಕಲಾವಿದ ಮತ್ತು ಚಿತ್ರನಟರಾದ ಸಿ ಆರ್ ಸಿಂಹ ಮತ್ತು ಸಾಹಿತಿಗಳಾದ ಲಿಂಗದೇವರು ಹಳೆಮನೆಯವರಿಂದ ಚಾಲನೆಯನ್ನು ಪಡೆದು, ಜೋಕುಮಾರಸ್ವಾಮಿ ಮತ್ತು ‘ಛತ್ತೀಸ್‍ಘಡದ ಛಾವ್ ನೃತ್ಯ’ದೊಂದಿಗೆ ಹಲವು ನಾಟಕಗಳು ಪ್ರದರ್ಶಿತಗೊಂಡವು. ಹೀಗೆ ನಂತರದ ಉತ್ಸವಗಳಲ್ಲಿ, ಸಾಹಿತಿಗಳಾದ ಪ್ರಭುಶಂಕರ, ಜನಪದ ವಿದ್ವಾಂಸರಾದ ಹಿ ಶಿ ರಾಮಚಂದ್ರೇಗೌಡರು, ರಂಗ ನಿರ್ದೇಶಕರಾದ ಬಿ ವಿ ರಾಜಾರಾಂ, ಗ್ರೀನ್ ಆಸ್ಕರ್ ವಿಜೇತರಾದ ಕೃಪಾಕರ, ಸೇನಾನಿ, ಚಿದಂಬರರಾವ್ ಜಂಬೆ, ಪ್ರಸನ್ನ (ಹೆಗ್ಗೋಡು), ಸಂಪಾದಕಾರದ ದಿವಂಗತ ರಾಜಶೇಖರ ಕೋಟಿ, ಸಾಹಿತಿಗಳಾದ ಜಯಂತ ಕಾಯ್ಕಿಣಿ, ಪಿ ಗಂಗಾಧರಸ್ವಾಮಿ, ಪ್ರೊ, ಕೆ ಎಸ್ ರಂಗಪ್ಪ, ಮುಂತಾದ ಹಲವು ಗಣ್ಯರಿಂದ ಉತ್ಸವವು ಉದ್ಘಾಟನೆಗೊಂಡು ಸಮಾರೋಪವನ್ನೂ ಕಂಡಿದೆ.

ಹಾಗೆಯೇ ರಾಜ್ಯದ ಮತ್ತು ದೇಶದ ನಾನಾ ಭಾಗಗಳಿಂದ ಹಲವಾರು ರಂಗತಂಡಗಳ ಹೆಸರಾಂತ ನಿರ್ದೇಶಕರ ನಾಟಕಗಳಾದ, ಹಯವದನ, ನೀರು ತಂದವರು, ಅಗ್ನಿಲೋಕ, ಮದುವೆ ಹೆಣ್ಣು, ಚಿರಕುಮಾರ ಸಭಾ, ಸಾಹೇಬರ ಸರ್ಕೀಟು, ಅಹಲ್ಯೆ, ನಂದರಾಜ ವಿನೋದ ಅರ್ಥಾತ್ ಶನಿಪ್ರಭಾವ, ರಬ್ಡಿ, ನಿಮಿತ್ತ, ತುಘಲಕ್, ಮರಾಠಿ ನಾಟಕ- ಆಷಾಟತ್ತಿಲ್ ಏಕ್ ದಿವಸ್, ಸಂಸ್ಕøತ ನಾಟಕ- ಪ್ರತಿಮಾ ನಾಟಕಂ, ಸೋರುತಿಹುದು ಸಂಬಂಧ, ಒರೆಸ್ತಿಸ್ ಪುರಾಣ, ಮೃತ್ಯುಂಜಯ, ಸೋರುತಿಹುದು ಸಂಬಂಧ, ರುಢಾಲಿ, ಚಕಾವ್ ಟು ಶಾಂಪೇನ್, ವಾಲಿವಧೆ, ಸ್ವಪ್ನವಾಸವದತ್ತ, ಮಹಾರಾಜ ಉಬು, ಮುಂತಾದ ಹತ್ತಾರು ನಾಟಕಗಳು ಪ್ರದರ್ಶನ ಕಂಡಿದೆ. ಇವುಗಳೊಂದಿಗೆ ನಿರಂತರದ ಟೀ ಹೌಸ್, ಶಿವರಾತ್ರಿ, ಕೂಡಲಸಂಗಮ, ರಸ್ತೆ ನಕ್ಷತ್ರದಂತಹ ಪ್ರಮುಖ ನಾಟಕಗಳೂ ಪ್ರದರ್ಶನಗೊಂಡಿದೆ.

ಇವೆಲ್ಲಾ ವಿಶೇಷಗಳೊಂದಿಗೆ ನಿರಂತರವು ರಾಷ್ಟ್ರಮಟ್ಟದ ರಂಗ ಉತ್ಸವವನ್ನು 2014-15ರಲ್ಲಿ ಹಮ್ಮಿಕೊಂಡು, ಇಡೀ ರಾಜ್ಯದ ಗಮನವನ್ನು ಸೆಳೆದಿದೆ. ಅತುಲ್ ಪೇಟೆ, ಪಣಿಕ್ಕರ್‍ರಂತಹ ಪ್ರಮುಖ ನಿರ್ದೇಶಕರ ನಾಟಕಗಳ ಪ್ರದರ್ಶನ, ಮುಖ್ತಿಯಾರ್ ಅಲಿರವರ ಸೂಫೀ ಸಂಗೀತ, ಹತ್ತಾರು ಜನಪದ ಕಲಾಪ್ರದರ್ಶನಗಳು, ರಂಗವಿಚಾರ ಸಂಕಿರಣ, ಸಂವಾದ, ಚರ್ಚೆ, ಛಾಯಾಚಿತ್ರ ಗ್ಯಾಲರಿ, ಚಿತ್ರಕಲಾ ಪ್ರದರ್ಶನ, ಮುಂತಾದ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಒಂದು ಹವ್ಯಾಸಿ ತಂಡವಾಗಿ ಯಾವುದೇ ವೃತ್ತಿಪರ ತಂಡದ ಕಾರ್ಯಕ್ರಮಕ್ಕೂ ಕಡಿಮೆಯಿಲ್ಲದಂತೆ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮ ರೂಪಿಸಿ, ಎಲ್ಲರಿಂದಲೂ ಮನ್ನಣೆಗೆ ಪಾತ್ರವಾಯಿತು.

ಹೀಗೆ ಹವ್ಯಾಸಿಯಾದರೂ ವೃತ್ತಿಪರತೆಯಿಂದ ಕಳೆದ ವರ್ಷಗಳ ರಂಗ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದು ಇದೀಗ ಹತ್ತನೇ ವರ್ಷದ ರಂಗ ಉತ್ಸವಕ್ಕೆ ಅಣಿಯಾಗಿದೆ. ಈ ಬಾರಿಯೂ ಬ್ರೆಕ್ಟ್‍ನ ‘ಮೂರುಕಾಸಿನ ಸಂಗೀತ ನಾಟಕ’, ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ, ಚೋಮನ ದುಡಿ, ನಿರಂತರದ ರಂಗಗೀತೆಗಳ ಪ್ರಸ್ತುತಿ, ಸಂದೇಹ ಸಾಮ್ರಾಜ್ಯ ನಾಟಕಗಳೊಂದಿಗೆ ಚಂಡೆವಾದನ, ತತ್ವಪದ ಗಾಯನ, ಸೋಮನ ಕುಣಿತ, ನೀಲಗಾರರ ಮೇಳದಂತಹ ಪ್ರಮುಖ ಜನಪದ ಕಲಾಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಬದ್ಧತೆ, ಪ್ರಾಮಾಣಿಕತೆ, ನೈತಿಕತೆ, ಸಂವೇದನೀಯತೆಯಿಂದ ರೂಪಿಸಲಾದ ಈ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಲು ಬೆನ್ನೆಲುಬಾಗಿ ನಿಂತ ನಾಡಿನ ಹಲವು ಹಿರಿಯರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಸಾಂಸ್ಕøತಿಕವಾಗಿ ನಾವೆಲ್ಲ ಚೂರು ಚೂರಾಗಿ ಒಡೆದು ಹೋಗುತ್ತಿರುವ ಈ ಇಕ್ಕಟ್ಟಿನ ಸಂದರ್ಭದಲ್ಲಿ ಇಂಥ ರಂಗ ಉತ್ಸವ ಜನರ ಒಳ ದನಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಿದೆ ಎಂಬ ಆಶಯದೊಂದಿಗೆ ಪ್ರತೀ ವರ್ಷವೂ ಈ ರಂಗಹಬ್ಬವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version