ದಿನದ ಸುದ್ದಿ

ಬ್ರಸ್ಸೇಲ್ಸ್ ಗೆ ಪರಾರಿಯಾದ ನೀರವ್ ಮೋದಿ 

Published

on

ಸುದ್ದಿದಿನ ಡೆಸ್ಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಹನ್ನೊಂದು ಸಾವಿರ ಕೋಟಿ ರೂಪಾಯಿ ವಂಚಿಸಿದ ಗುಜರಾತ್ ಮೂಲದ ವಜ್ರದ ವ್ಯಾಪಾರಿ ನೀರವ್ ಮೋದಿ ಅವರು ಬ್ರಿಟನ್‍ನಿಂದ ಬ್ರಸ್ಸೆಲ್ಸ್‍ಗೆ ಫಲಾಯನರಾಗಿದ್ದಾರೆ ಎಂದು ತಿಳಿದುಬಂದಿದೆ.
ಬ್ರಿಟನ್‍ನಲ್ಲಿ ರಾಜಕೀಯ ಆಶ್ರಯ ಪಡೆಯಲು ನೀರವ್ ಅವರು ಅರ್ಜಿ ಹಾಕಿದ್ದಾರೆ ಎಂಬ ಕುರಿತು ದಿನಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಬಿತ್ತರವಾದ ಹಿನ್ನೆಲೆಯಲ್ಲಿ ವಿಮಾನ ಪ್ರಯಾನ ಮಾಡುತ್ತಿದ್ದ ನೀರವ್ ಅವರು ಮಧ್ಯದ ನಿಲ್ದಾಣದಲ್ಲೇ ಇಳಿದು ಬ್ರಸ್ಸೆಲ್ಸ್‍ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರವಷ್ಟೆ ಸಿಬಿಐ ನೀರವ್ ಮೋದಿ ಹಾಗೂ ಅವರ ಸಹೋದರ ಬೆಲ್ಜಿಯಂ ಮೂಲದ ನಿಶಾಲ್ ಅವರ ವಿರುದ್ಧ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಮುಂಬಯಿನ ವಿಶೇಷ ನ್ಯಾಯಾಲಯವು ನೀರವ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಜಾಮೀನು ರಹಿತ ಬಂಧನ ಆದೇಶ ಹೊರಡಿಸಿತ್ತು.

ನೀರವ್ ಬಳಿ ಸಿಂಗಾಪುರ ಪಾಸ್‍ಪೋರ್ಟ್?

ನೀರವ್ ಮೋದಿ ತನ್ನ ಪ್ರಯಾಣಕ್ಕಾಗಿ ಸಿಂಗಾಪುರ ಪಾಸ್‍ಪೋರ್ಟ್ ಬಳಸುತ್ತಿದ್ದಾರೆ ಎಂಬ ಗುಮಾನಿ ವ್ಯಕ್ತವಾಗಿದೆ. ನೀರವ್ ಭಾರತೀಯ ಪಾಸ್‍ಪೋರ್ಟ್ ಆಧಾರದ ಮೇಲೆ ಪ್ರಯಾಣ ಮಾಡುತ್ತಿದ್ದಾರೆ ಎಂಬ ಆಧಾರದ ಮೇರೆಗೆ ಸಿಬಿಐ ಇಂಟರ್‍ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಆದರೆ, ಅವರು ಒಂದು ವೇಳೆ ಸಿಂಗಾಪುರ ಪಾಸ್‍ಪೋರ್ಟ್ ಹೊಂದಿದ್ದರೆ ರೆಡ್‍ಕಾರ್ನರ್ ನೋಟಿಸ್ ನಿಷ್ಪ್ರಯೋಜಕವಾಗುತ್ತದೆ.
ಬ್ರಿಟನ್‍ನ ಭಾರತೀಯ ರಾಯಭಾರಿ ಕಚೇರಿಗೆ ಈ ಕುರಿತು ಕೇಂದ್ರ ಸರಕಾರ ಪ್ರಶ್ನಿಸಿದ್ದು, ನೀರವ್ ಅವರ ಬಳಿ ಯಾವ ಪಾಸ್‍ಪೋರ್ಟ್ ಇದೆ ಎಂಬುದು ತನಗೂ ಗೊತ್ತಿಲ್ಲ ಎಂದು ಕಚೇರಿಯು ಉತ್ತರಿಸಿದೆ.

Leave a Reply

Your email address will not be published. Required fields are marked *

Trending

Exit mobile version