/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಪನಾಮಾ ಪೇಪರ್ಸ್ ಜತೆ ನೀರವ್ ಮೋದಿ ಲಿಂಕ್

Published

on

ಸುದ್ದಿದಿನ ಡೆಸ್ಕ್: ಸಾವಿರಾರು ಕೋಟಿ ರೂಪಾಯಿ ಉದ್ದೇಶಪೂರಿತ ಸುಸ್ತಿದಾರರಾಗಿ ವಿದೇಶಕ್ಕೆ ಪರಾರಿಯಾಗಿರುವ ಗುಜರಾತ್ ಮೂಲದ ಉದ್ಯಮಿ ನೀರವ್ ಮೋದಿ ಅವರ ಚಾರ್ಟೆಡ್ ಅಕೌಂಟಿಂಗ್ ಕಂಪನಿಯೊಂದು ವಿದಾದಿದ ಪನಾಮಾ ಪೇಪರ್ಸ್ ಕಂಪನಿ ಜತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ.
ಲಂಡನ್‍ನ ಹ್ಯಾರೋ ನಗರದ ಕಾಲೇಜ್ ರಸ್ತೆಯಲ್ಲಿರುವ ಡಟ್ಟಾನಿ ಚಾರ್ಟೆಡ್ ಅಕೌಂಟಿಂಗ್ ಸಂಸ್ಥೆಯು ನೀರವ್ ಮೋದಿ ಲಿಮಿಟೆಡ್‍ನ ಅಂಗಸಂಸ್ಥೆಯಾಗಿದ್ದು, ಇದು 2014ರಿಂದ ಲಂಡನ್‍ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇದೇ ಹೆಸರಿನಲ್ಲಿ ಹಾಂಗ್‍ಕಾಂಗ್‍ನಲ್ಲೂ ಒಂದು ಒಂದು ಕಂಪನಿಯು ತನ್ನ ಹೆಸರು ನೋಂದಣಿ ಮಾಡಿಕೊಂಡಿದ್ದು, ಹಾಂಗ್‍ಕಾಂಗ್‍ನಾದ್ಯಂತ ಆಭರಣ ಹಾಗೂ ಐಶಾರಾಮಿ ವಾಚ್‍ಗಳನ್ನು ಮಾರಾಟ ಮಾಡುವ ಶೋರೂಂಗಳನ್ನು ಹೊಂದಿದೆ.
ಡಟ್ಟಾನಿ ಸಂಸ್ಥೆಯ ಮಾಲೀಕ ನಿತಿನ್ ಡಟ್ಟಾನಿ ಅವರನ್ನು ಖಾಸಗಿ ಸುದ್ದಿಸಂಸ್ಥೆಯೊಂದು ಸಂಪರ್ಕಿಸಿದ್ದು, ನೀರವ್ ಮೋದಿ ಲಿಮಿಟೆಡ್ ಎಂಬ ಸಂಸ್ಥೆಗೆ ನಾವು ಆಡಿಟರ್‍ಗಳಷ್ಟೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಿಜ ಹೇಳಬೇಕೆಂದರೆ ನೀರವ್ ಮೋದಿ ಯಾರೆಂಬ ಮಾಹಿತಿಯೇ ನಮಗಿಲ್ಲ. ನಾವು ಆ ಸಂಸ್ಥೆಗೆ ಆಡಿಟಿಂಗ್‍ನಲ್ಲಿ ಸಹಾಯ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪನಾಮಾ ಪೇಪರ್ಸ್ ಜತೆ ಈ ಕಂಪನಿಯು ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಭಾರಿ ವಿವಾದ ಎಬ್ಬಿಸಿದ ಪನಾಮಾ ಪೇಪರ್ಸ್ ಒಂದು ಆಡಿಟಿಂಗ್ ಸಂಸ್ಥೆಯಾಗಿದೆ. ಇದು ಸರಕಾರದ ಕಣ್ತಪ್ಪಿಸಿ ತೆರಿಗೆ ವಂಚನೆ ಮಾಡುವುದು ಹೇಗೆ ಎಂಬ ಕುರಿತು ದೇಶದ ಸಿರಿವಂತರಿಗೆ ಸಲಹೆ ನೀಡುತ್ತಿತ್ತು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಮಲ್ಯ ಮೊದಲಾದ ಸಿರಿವಂತರು ಈ ಕಂಪನಿಯ ಗಿರಾಕಿಗಳು ಎಂದು ಪನಾಮಾ ಪೇಪರ್ಸ್ ಲೀಕ್‍ನಿಂದ ತಿಳಿದುಬಂದಿತ್ತು.

Leave a Reply

Your email address will not be published. Required fields are marked *

Trending

Exit mobile version